ಕೊಳ್ನಾಡು: ಲಾರಿಯಿಂದ ತೆಂಗಿನ ಸಿಪ್ಪೆಯ ಹುಡಿ ಖಾಲಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ➤ ಪಂಜ ನಿವಾಸಿ ಮೃತ್ಯು, ಓರ್ವ ಗಂಭೀರ



(ನ್ಯೂಸ್ ಕಡಬ) newskadaba.com ವಿಟ್ಲ, ಜೂ.29. ಲಾರಿಯಿಂದ ತೆಂಗಿನ ಸಿಪ್ಪೆಯ ಹುಡಿಯನ್ನು ಖಾಲಿ ಮಾಡುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ಹಾರೆ ಲಾರಿಯ ಮೇಲ್ಭಾಗದಲ್ಲಿ ಹಾದು ಹೋಗಿದ್ದ ಹೈಟೆನ್ಶನ್ ತಂತಿಗೆ ತಗುಲಿ ವಿದ್ಯುತ್ ಶಾಕ್ ಬಡಿದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಕೊಲ್ನಾಡು ಗ್ರಾಮದ ಕಲ್ಕಾಜೆ ಎಂಬಲ್ಲಿ ಶನಿವಾರದಂದು ಸಂಭವಿಸಿದೆ.







ಮೃತ ಕಾರ್ಮಿಕನನ್ನು ಪಂಜ ನಿವಾಸಿ ವಾಸುದೇವ ಪ್ರಭು(50) ಎಂದು ಗುರುತಿಸಲಾಗಿದೆ. ಒರಿಸ್ಸಾ ಮೂಲದ ಸುಜಿತ್(20) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಕಾಜೆಯಲ್ಲಿರುವ ಕೋಳಿ ಫಾರ್ಮೊಂದಕ್ಕೆ ಕೇರಳದ ನೀಲೇಶ್ವರದಿಂದ ತೆಂಗಿನ ಸಿಪ್ಪೆಯ ಹುಡಿ ತಂದು ಖಾಲಿ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.






error: Content is protected !!
Scroll to Top