ಪೋಷಕರ ವಿರೋಧದ ಮಧ್ಯೆಯೂ ಪ್ರೀತಿಸಿ ಮದುವೆ ► ಎರಡೇ ವಾರದಲ್ಲಿ ಗಂಡನನ್ನು ಬಿಟ್ಟುಹೋದ ಹೆಂಡತಿ

(ನ್ಯೂಸ್ ಕಡಬ) newskadaba.com ಹಾಸನ, ಆ.09. ಕೇವಲ ಮೂರು ತಿಂಗಳ ಹಿಂದೆ ಆದ ಪರಿಚಯ ಪ್ರೇಮಕ್ಕೆ ತಿರುಗಿ ಹುಡುಗಿ ಮನೆಯವರ ತೀವ್ರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿ ಕೇವಲ 12 ದಿನದಲ್ಲಿ ಗಂಡನನ್ನು ತೊರೆದು ಹೆಂಡತಿ ಮನೆಯವರೊಂದಿಗೆ ತೆರಳಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ.

ಹಾಸನ ರಸ್ತೆಯ ನಿವಾಸಿ ಶೇಖರಪ್ಪ ಎಂಬುವರ ಪುತ್ರ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಗುರು ಹಾಗೂ ಪಟ್ಟಣದ ಮಾರುತಿ ನಗರದ ಚಂದ್ರೇಗೌಡ ಎಂಬುವರ ಪುತ್ರಿ ಅಂತಿಮ ಬಿ.ಎ. ಓದುತ್ತಿದ್ದ ಶೋಭಾ ಪರಸ್ಪರ ಪ್ರೀತಿಸಿ ಹುಡುಗಿ ಮನೆಯವರ ತೀವ್ರ ವಿರೋಧದ ನಡುವೆಯೂ ಜುಲೈ 27 ರಂದು ಗುರು ಹಿರಿಯರ ಸಮ್ಮುಖದಲ್ಲಿ ದೇವಾಲಯವೊಂದರಲ್ಲಿ ಮದುವೆಯಾಗಿದ್ದರು. ಅಲ್ಲದೆ ಅರಸೀಕೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜುಲೈ 31 ರಂದು ನೋಂದಣಿಯನ್ನೂ ಮಾಡಿಸಿದ್ದರು. ಆದರೆ ಆಗಸ್ಟ್ 08 ರಂದು ಹುಡುಗಿ ಮನೆಯವರಿಗೆ ಮುಚ್ಚಳಿಕೆ ಬರೆದುಕೊಡಲಿದೆ ಎಂಬ ಕಾರಣದಿಂದ ಪೊಲೀಸ್ ಠಾಣೆಗೆ ಕರೆಸಿ ಸರ್ಟಿಫಿಕೆಟ್ ಎಳೆದುಕೊಂಡು ಹುಡುಗಿಯನ್ನು ಆಕೆಯ ತಾಯಿ ಬಳಿ ಕಳುಹಿಸಿದ್ದಲ್ಲದೆ ನಂತರ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಗುರು ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ನನ್ನೊಂದಿಗೆ ಹೆಂಡತಿಯನ್ನು ಕಳುಹಿಸಿಕೊಡಬೇಕು. ಆಕೆ ಇಲ್ಲವೆಂದಲ್ಲಿ ನಾನು ಖಂಡಿತಾ ಸಾಯುತ್ತೇನೆ  ಎಂದು ಮಾಧ್ಯಮದ ಮುಂದೆ ಗುರು ಕಣ್ಣೀರು ಹಾಕಿದ್ದಾರೆ.

Also Read  ಈ ಸಲದ ದೀಪಾವಳಿಗೆ ಪಟಾಕಿ ಅಂಗಡಿ ಮಾಡಬೇಕೆಂದಿರುವಿರಾ..? ➤ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆಗೆ ಅರ್ಜಿ ಆಹ್ವಾನ

 

error: Content is protected !!
Scroll to Top