ಕಡಬ: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ ➤ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ ಡೆಂಗ್ಯೂ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಡೆಂಗ್ಯೂ ಜ್ವರಕ್ಕೆ ತುತ್ತಾದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.

ಮೃತ ಮಹಿಳೆಯನ್ನು ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ನಿವಾಸಿ ಆನಂದ ನಾಯ್ಕ್ ಎಂಬವರ ಪತ್ನಿ ವೀಣಾ (43) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೀಣಾ ರವರಿಗೆ ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಹಿಳೆಯ ದೇಹದಲ್ಲಿ ಬಿಳಿರಕ್ತದ ಕಣ ಕಡಿಮೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.

Also Read  ಧರ್ಮಸ್ಥಳ :ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಣೆ

ಕಡಬದ ಕೋಡಿಂಬಾಳ ಪರಿಸರದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದು, ಬುಧವಾರದಂದು ಬಾಲಕ ಹಾಗೂ ಮಹಿಳೆಯರಿಬ್ಬರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!
Scroll to Top