ಸಿಡಿಲಿನಬ್ಬರಕ್ಕೆ ಬಿರುಕು ಬಿಟ್ಟಿತೇ ಐತಿಹಾಸಿಕ ಪ್ರವಾಸಿ ತಾಣ ಗಡಾಯಿಕಲ್ಲು ? ➤ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕರು, ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.25.ಐತಿಹಾಸಿಕ ಪ್ರವಾಸಿ ತಾಣ, ಕುದುರೆಮುಖ ಪರ್ವತಶ್ರೇಣಿಗೆ ಅಂಟಿಕೊಂಡಿರುವ ಗಡಾಯಿಕಲ್ಲು ಸಿಡಿಲಿಗೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಲ್ಲಿನ ಪೂರ್ವ ದಿಕ್ಕಿನ ಬುಡಕ್ಕೆ ಬಂದು ಪರಿಶೀಲಿಸಿದ್ದಾರೆ.

ಈ ಸಂದರ್ಭದಲ್ಲಿ 10 ರಿಂದ 15 ಅಡಿ ಉದ್ದಕ್ಕೆ ಬಂಡೆಯ ಬೃಹತ್ ಚಪ್ಪಡಿಯೊಂದು ಚೂರು ಚೂರಾಗಿ ಕೆಳಗಿನ ಭಾಗಕ್ಕೆ ಜಾರಿರುವುದು ಗೋಚರಿಸಿದೆ. ಸಿಡಿಲಾಘಾತಕ್ಕೆ ಈ ರೀತಿ ಆಗಿದೆ ಎಂದು ಹೇಳಲಾಗಿತ್ತಾದರೂ, ಬಿರುಕು ಬಿಟ್ಟ ಯಾವುದೇ ಕುರುಹುಗಳು ಗೋಚರಿಸಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸಲು ಶಾಸಕರು ಸೂಚಿಸಿದ್ದಾರೆ.

ಆದರೆ ಕೆಲವು ಪ್ರವಾಸಿಗರು, ಚಾರಣಿಗರು ಇದನ್ನು ನಿರಾಕರಿಸುತ್ತಿದ್ದು, ನಾವು ಪ್ರತೀ ವರ್ಷ ಗಡಾಯಿಕಲ್ಲಿನ ಮೇಲೆ ಹೋಗುತ್ತೇವೆ. ಮಳೆಗಾಲದಲ್ಲಿ ಕಂಡುಬರುವ ಪಾಚಿ ಕಲ್ಲಿಗೆ ದಪ್ಪವಾಗಿ ಅಂಟಿಕೊಂಡಿರುತ್ತದೆ. ಇದು ಬೇಸಿಗೆಯಲ್ಲಿ ಒಣಗಿ ಮಳೆಗಾಲ ಬರುವಾಗ ನೀರಿನಲ್ಲಿ ಒದ್ದೆಯಾಗಿ ಕಳಚಿ ಬೀಳುತ್ತದೆ. ಆಗ ಕಲ್ಲು ಸ್ವಚ್ಛವಾಗಿ ಕಾಣುತ್ತದೆ. ಇದು ಕಲ್ಲು ಜಾರಿದಂತೆ ಕಾಣುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

error: Content is protected !!

Join the Group

Join WhatsApp Group