ಸಾಪಿಯೆನ್‍ಶಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿಯಲ್ಲಿ ಪದವಿ ತರಗತಿಗಳ ಆರಂಭೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ಸಾಪಿಯೆನ್‍ಶಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿಯಲ್ಲಿ ಪದವಿ ತರಗತಿಗಳ ಆರಂಭೋತ್ಸವ ಶನಿವಾರ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಬೆಥನಿ ಸಮೂಹ ಸಂಸ್ಥೆಗಳ ಸಂಚಾಲಕರು ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರೆ| ಡಾ| ಫಾ| ವರ್ಗೀಸ್ ಕೈಪನಡುಕ್ಕ ಒಐಸಿ ಮಾತನಾಡಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಎಂ ಕಾಲೇಜಿನ ಉಪನ್ಯಾಸಕರಾದ ಮಹಾವೀರ ಜೈನ್ ಮಾತನಾಡಿ ನಿರಂತರ ಕಲಿಕೆ ಸಂಸ್ಕಾರಯುತ ಜೀವನಗಳ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕರಿಗೆ ತಿಳಿಸದರು. ಕಾರ್ಯಕ್ರಮದಲ್ಲಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ, ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಗೀತಾ ಉಪಸ್ಥಿತರಿದ್ದರು. ಹನ್ನತ್ ಸ್ವಾಗತಿಸಿ, ಜಿಲ್ಷಿತಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Also Read  ಮಂಗಳೂರು: ದೀಪಾವಳಿ ಸಂಭ್ರಮ

error: Content is protected !!
Scroll to Top