ಮಾಣಿ: ಖಾಸಗಿ ಬಸ್ಸುಗಳಿಗೆ ಕಲ್ಲೆಸೆದ ದುಷ್ಕರ್ಮಿಗಳು ➤ ಮೂರು ಬಸ್ಸುಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.25. ಖಾಸಗಿ ಬಸ್ಸುಗಳಿಗೆ ದುಷ್ಕರ್ಮಿಗಳು ಕಲ್ಲು ತೂರಿ ಹಾನಿಗೈದ ಘಟನೆ ಮಂಗಳವಾರ ಬೆಳಿಗ್ಗೆ ಮಾಣಿ ಪರಿಸರದಲ್ಲಿ ನಡೆದಿದೆ.

ಪುತ್ತೂರು – ಮಂಗಳೂರು ನಡುವೆ ಸಂಚರಿಸುತ್ತಿದ್ದ ಸೆಲೀನಾ ಸಂಸ್ಥೆಗೆ ಸೇರಿದ ಎರಡು ಬಸ್ ಗಳು ಹಾಗೂ ಸೇಫ್ ವೇ ಸಂಸ್ಥೆಯ ಒಂದು ಬಸ್ ಗೆ ಮಾಣಿ ಸಮೀಪದ ಸೂರಿಕುಮೇರ್ ಹಾಗೂ ಕುದ್ರೆಬೆಟ್ಟು ಎಂಬಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ‌. ಘಟನೆಯಲ್ಲಿ ಬಸ್ಸಿನ ಗಾಜು ಸಂಪೂರ್ಣ ಹಾನಿಗೀಡಾಗಿದ್ದು, ಚಾಲಕರು ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ‌. ಸ್ಥಳಕ್ಕೆ ವಿಟ್ಲ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆಯನ್ನು ಮುಂದುವರಿಸುತ್ತಿದ್ದಾರೆ.

Also Read  Obtain Windows 7 Activator 2024 (All Strategies)

error: Content is protected !!
Scroll to Top