ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ ► ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ವಿಜಯಪುರ, ಆ.08. ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಸಹೋದರ ಬಾಗಪ್ಪ ಎಂಬವರ ಮೇಲೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರದಂದು ಹಾಡುಹಗಲೇ ಗುಂಡಿನ ದಾಳಿ ನಡೆದಿದೆ.

ಬಾಗಪ್ಪನಿಗೆ ಸಹೋದರ ಸಂಬಂಧಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಇತ್ತು. ಅದರಂತೆ ಬಾಗಪ್ಪ ನ್ಯಾಯಾಲಯಕ್ಕೆ ಒಬ್ಬಂಟಿಯಾಗಿಯೇ ಬರುತ್ತಿದ್ದನೆನ್ನಲಾಗಿದೆ‌. ಇಂದು ಬೆಳಗ್ಗೆ ವಿಚಾರಣೆಗೆ ಬಂದಿದ್ದ ಬಾಗಪ್ಪನ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಮೂರು ಗುಂಡುಗಳು ಬಾಗಪ್ಪನ ದೇಹ ಹೊಕ್ಕಿದ್ದು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಆರೋಗ್ಯಪೂರ್ಣ ಭಾರತಕ್ಕಾಗಿ ಜಾಗೃತಿ ವಹಿಸೋಣ - ಡಾ. ಪದ್ಮನಾಭ ಕಾಮತ್

ಕಳೆದ ತಿಂಗಳಷ್ಟೇ ಬಾಗಪ್ಪ ಕಸ್ಡಡಿಯಿಂದ ಹೊರಬಂದಿದ್ದು, ಇದು ಎರಡನೇ ವಿಚಾರಣೆಯಾಗಿತ್ತು. ಕೆಲ ದಿನಗಳ ಹಿಂದೆ
ಸಾಕ್ಷಿದಾರನಿಗೂ ಬಾಗಪ್ಪ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಸದ್ಯ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

error: Content is protected !!
Scroll to Top