ನಂ.1 ಸ್ಥಾನದತ್ತ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ

(ನ್ಯೂಸ್ ಕಡಬ) newskadaba.com ಲಂಡನ್‌, ಜೂನ್.22. ಬರ್ಮಿಂಗ್‌ಹ್ಯಾಮ್‌ನಲ್ಲಿ ಸಾಗುತ್ತಿರುವ ನೇಚರ್‌ ವ್ಯಾಲಿ ಕ್ಲಾಸಿಕ್‌ ಕೂಟದಲ್ಲಿ ಬಾರ್ಟಿ ಪ್ರಶಸ್ತಿ ಗೆದ್ದರೆ ಅಗ್ರ ಸ್ಥಾನಕ್ಕೇರಲಿದ್ದಾರೆ. ಈ ಮೂಲಕ 40ವರ್ಷಗಳ ಸುದೀರ್ಘ‌ ಸಮಯದ ಬಳಿಕ ನಂ.1 ಸ್ಥಾನಕ್ಕೇರಿದ ಆಸ್ಟ್ರೇಲಿಯದ ಮೊದಲ ವನಿತೆ ಎನಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಬಳಿಕ ನಂ.1 ಸ್ಥಾನಕ್ಕೇರಿದ್ದ ನವೋಮಿ ಒಸಾಕಾ ಇಲ್ಲಿ ದ್ವಿತೀಯ ಸುತ್ತಿನಲ್ಲಿ  ಸೋತ ಕಾರಣ ಬಾರ್ಟಿ ಅವರಿಗೆ ಅಗ್ರಸ್ಥಾನಕ್ಕೇರುವ ಸುವರ್ಣಾವಕಾಶ ಲಭಿಸಿದೆ.ಪ್ರಶಸ್ತಿ ಸುತ್ತಿಗೇರುವ ಮೊದಲು ಬಾರ್ಟಿ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಐದು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ಅವರ ಸವಾಲನ್ನು ಎದುರಿಸಬೇಕಾಗಿದೆ.

Also Read  ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್‌ ಐಪಿಎಲ್‌ಗೆ ಪದಾರ್ಪಣೆ

 

error: Content is protected !!
Scroll to Top