ಕಂಡಕಂಡಲ್ಲಿ ವಾಹನ ನಿಲ್ಲಿಸಿದರೆ ಲೈಸನ್ಸ್ ರದ್ದು ► ವಾಹನ ಚಾಲಕರಿಗೆ ಆರ್‍ಟಿಓ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಆ.07. ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ನಿಗದಿತ ಬಸ್‍ ತಂಗುದಾಣಗಳಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕಲ್ಲದೆ ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು ಕಂಡುಬಂದಲ್ಲಿ ಚಾಲಕರ ಡ್ರೈವಿಂಗ್ ಲೈಸನ್ಸನ್ನೇ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರ್‍ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಹಾಗೂ ಅಪಘಾತಗಳು ನಡೆಯುವ ಸಂಭವವಿರುತ್ತದೆ. ವಾಹನಗಳನ್ನು ರಸ್ತೆ ಮಧ್ಯದಲ್ಲಿ ನಿಲುಗಡೆಗೊಳಿಸುವುದು ಕಂಡುಬಂದಲ್ಲಿ ಬಸ್ಸು ಚಾಲಕರ ಡ್ರೈವಿಂಗ್ ಲೈಸನ್ಸನ್ನೇ ರದ್ದುಪಡಿಸಲಾಗುವುದು. ಬಸ್ಸಿನ ಚಾಲಕ/ನಿರ್ವಾಹಕರು ಸಮವಸ್ತ್ರವನ್ನು ತಪ್ಪದೇ ಧರಿಸಬೇಕು. ಸುರಕ್ಷತಾ ದೃಷ್ಟಿಯಿಂದ ಪ್ರಯಾಣಿಕರು ಬಸ್ಸು ಬೇ/ ತಂಗುದಾಣದಲ್ಲಿಯೇ ಬಸ್ಸನ್ನು ಹತ್ತಬೇಕು ಹಾಗೂ ಇಳಿಯಬೇಕು. ಯಾವುದೇ ಕಾರಣಕ್ಕೂ ಚಲಿಸುತ್ತಿರುವ ಬಸ್ಸನ್ನು ಹತ್ತುವುದು ಅಥವಾ ಇಳಿಯುವುದು ಮಾಡಬಾರದಾಗಿ ಆರ್‍ಟಿಓ ಪ್ರಕಟಣೆ ತಿಳಿಸಿದೆ.
error: Content is protected !!
Scroll to Top