(ನ್ಯೂಸ್ ಕಡಬ) newskadaba.com ಬಿಜಾಪುರ, ಆ.07. ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಚಕ್ರವೊಂದು ಹಠಾತ್ತಾಗಿ ಕಳಚಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸಿಂದಗಿ ತಾಲ್ಲೂಕಿನ ರಾಂಪೂರ ಗ್ರಾಮದ ಸಮೀಪದಲ್ಲಿ 40 ಕ್ಕೂ ಹೆಚ್ಚಿನ ಪ್ರಯಾಣಿಕರು ಸಾಗುತ್ತಿದ್ದ ಬಸ್ಸಿನ ಮುಂಭಾಗದ ಬಲ ಬದಿಯ ಚಕ್ರ ಕಳಚಿ ಬಂದಿದ್ದರಿಂದಾಗಿ ಒಂದು ಕ್ಷಣ ಪ್ರಯಾಣಿಕರು ಉಸಿರು ಬಿಗಿ ಹಿಡಿಯುವಂತಾಗಿತ್ತು. ಅಪಾಯದ ಮುನ್ಸೂಚನೆ ಅರಿತ ಚಾಲಕ ಸಮಯ ಪ್ರಜ್ಞೆಯಿಂದ ಬಸ್ಸನ್ನು ಹತೋಟಿಗೆ ತಂದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ನಿರುಪಯುಕ್ತ ಬಸ್ಸುಗಳನ್ನು ಓಡಿಸುತ್ತಿರುವ ಸಿಂದಗಿ ಬಸ್ ಡಿಪೋ ಘಟಕದ ವ್ಯವಸ್ಥಾಪಕರ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿ ಶಾಪ ಹಾಕಿದರು.