ಸಿದ್ದರಾಮಯ್ಯ ಸಿ ಎಲ್ ಪಿ ನಾಯಕ, ಗೌರವ ಕೊಡಲೇ ಬೇಕು ➤ ಸಚಿವ ಡಿಕೆಶಿವಕುಮಾರ್ ಹೇಳಿಕೆ

ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರು ರೋಷನ್‌ ಬೇಗ್‌ ಅವರ ಅಮಾನತು ವಿಚಾರದ ಕುರಿತು ಪ್ರಶ್ನಿಸಿದಾಗ, ಸಚಿವ ಡಿ.ಕೆ.ಶಿವಕುಮಾರ್‌ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಅವರಿಗೆ ಗೌರವ ಕೊಡಲೇಬೇಕು ಎಂದು ಹೇಳಿದ್ದಾರೆ.ಅವರು ಶಾಸಕ ರೋಷನ್‌ ಬೇಗ್‌ ಅವರ ಅಮಾನತು ವಿಚಾರಕ್ಕೆ ಸಂಬಂಧಿಸಿ  ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗ್ಗೆ ಯಾರೋ ಎಐಸಿಸಿಯಲ್ಲಿ ಮಾಹಿತಿ ನೀಡಿದರು. ಈ ಬಗ್ಗೆ ಕೇಳಿ ಹೇಳುತ್ತೇನೆ ಎಂದರು.ನಾವೆಲ್ಲ ಗಾಂಧಿ ಕಟುಂಬಕ್ಕೆ, ಪಕ್ಷಕ್ಕೆ ನಿಷ್ಠೆ ಉಳ್ಳವರು. ಯಾವತ್ತೂ ವ್ಯಕ್ತಿ ಪೂಜೆ ಮಾಡಬಾರದು, ಪಕ್ಷದ ಪೂಜೆ ಮಾಡಬೇಕು ಎಂದರು. ಕಾಂಗ್ರೆಸ್‌ ಶಾಸಕರು ಸೇರಿದಂತೆ ಎಲ್ಲರಿಗೂ ಅವರವರಿಗೆ ಕೊಡಬೇಕಾದ ಗೌರವ ನೀಡಿದೆ ಎಂದರು.ನನಗೆ ಇನ್ನೇನು ಗೊತ್ತಿಲ್ಲ. ನನಗೆ ಏನೂ ಮಾತನಾಡಬಾರುದು ಎಂದಿದ್ದಾರೆ, ಹಾಗಾಗಿ ನಾನು ಹೆಚ್ಚೇನು ಮಾತನಾಡುವುದಿಲ್ಲ ಎಂದರು.

Also Read  ಟೊಮೇಟೊ ಬೆಲೆಯಲ್ಲಿ ಭಾರಿ ಕುಸಿತ ➤ ರೈತರು ಕಂಗಾಲು..!

 

error: Content is protected !!
Scroll to Top