ಗೂಬೆಯನ್ನು ಬಿಟ್ಟು ದರೋಡೆ ಮಾಡುತ್ತಿದ್ದ ತಂಡದ ಬಂಧನ ► ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡುತ್ತಿದ್ದ ಚೋರರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.07.  ಮೂಕ ಜೀವಿಯಾದ ಗೂಬೆಯನ್ನು ಬಳಸಿಕೊಮಡು ಸಿನಿಮೀಯ ಶೈಲಿಯಲ್ಲಿ ಮನೆ ದರೋಡೆ ನಡೆಸುತ್ತಿರುವ ತಂಡವನ್ನು ಬಂಧಿಸಿರುವ ರಾಜ್ಯ ಸಿಐಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಟನ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದ ಈ ತಂಡ, ದೂರದ ಕಾಡುಗಳಿಂದ ಗೂಬೆಗಳನ್ನು ಹಿಡಿದು ತಂದು ಮನೆಯವರಿಗೆ ಗೊತ್ತಾಗದ ಹಾಗೇ ಒಳಗೆ ಬಿಡುತ್ತಿದ್ದರು. ನಂತರ ಇದೇ ತಂಡದ ಸದಸ್ಯರು ಹೋಗಿ ನಿಮ್ಮ ಮನೆಗೆ ಗೂಬೆ ನುಗ್ಗಿದೆ. ಅದು ಅನಿಷ್ಟದ ಸಂಕೇತವಾಗಿದ್ದು, ಅದಷ್ಟು ಬೇಗ ಮನೆ ಖಾಲಿ ಮಾಡಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಬೇಕೆನ್ನುತ್ತಿದ್ದರು. ಅವರ ಮಾತನ್ನು ನಂಬಿ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಆ ಮನೆಯನ್ನು ಈ ತಂಡವು ರಾತ್ರೋ ರಾತ್ರಿ ದರೋಡೆ ಮಾಡುತ್ತಿತ್ತು. ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಅಣ್ಣ – ತಮ್ಮ, ಸಂಬಂಧಿಗಳ ಮಧ್ಯೆ ವೈಮನಸ್ಸಿದ್ದಲ್ಲಿ ಇವರು ಡೀಲ್ ತಗೊಂಡು ಗೂಬೆಯನ್ನು ಬಳಸಿಕೊಂಡು ಡೀಲ್ ಕುದುರಿಸುತ್ತಿದ್ದರು. ಅಲ್ಲದೆ ಮನೆಯನ್ನು ಮಾರಾಟ ಮಾಡಬೇಕು ಎಂದಾದಲ್ಲಿ ಮಾರುಕಟ್ಟೆಯ ಅರ್ಧ ಬೆಲೆಗೆ ಮಾರಾಟ ಮಾಡುವಂತೆ ಒತ್ತಡ ಹೇರಿ ನಂತರ ತಪ್ಪಿಸಿಕೊಳ್ಳುತ್ತಿದ್ದರು.

Also Read  ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ, ಮುಸ್ಲಿಮರಿಗೆ ಮತ್ತೆ ಮೀಸಲಾತಿ..! ➤ಜತೆಗೆ  ರಾಜ್ಯದಲ್ಲಿ Amul ಹಾಲಿಗೆ ಕಡಿವಾಣ.!

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಗೂಬೆ ಸೇರಿದಂತೆ ಐವರನ್ನು ಬಂಧಿಸಿ ಕಾಟನ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ತದು, ತನಿಖೆ ಮುಂದುವರಿಯುತ್ತಿದೆ.

 

error: Content is protected !!
Scroll to Top