ಬಿದ್ದು ಗಾಯಕ್ಕೊಳಗಾಗಿದ್ದ ತಂದೆ – ಮಗಳಿಗೆ ಸಹಾಯ ಧನ ಹಸ್ತಾಂತರ ► ದಾನಿಗಳ ಸಹಾಯ ಬೇಕಾಗಿದೆ

(ನ್ಯೂಸ್ ಕಡಬ) newskadaba.com ಕಡಬ, ಆ.07.  ಮರ್ಧಾಳ ಕೆದಿಲ ನಿವಾಸಿ ಲಿಂಗಪ್ಪ ಗೌಡ ಕಳೆದ ಮೂರು ತಿಂಗಳ ಹಿಂದೆ ಮರ್ಧಾಳ ಪೇಟೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಚರಂಡಿಗೆ ಬಿದ್ದು ಕಾಲಿಗೆ ಗಾಯವಾಗಿ ತನ್ನ ಟೈಲರ್ ವೃತ್ತಿಯನ್ನು ಮಾಡಲು ಅಸಾಧ್ಯವಾಗಿದ್ದು ಇದೀಗ ಕೆಲವು ದಿನಗಳ ಹಿಂದೆ ತನ್ನ ಮಗಳು ಅಂಗಳದಲ್ಲಿ ಆಟವಾಡುವ ವೇಳೆ ಬಿದ್ದು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಗಳ ಚಿಕಿತ್ಸೆಗೆ ಮರ್ದಾಳ ಪೇಟೆಯಲ್ಲಿ ಹಣ ಸಂಗ್ರಹಿಸಿ ನೀಡಲಾಯಿತು.
ಧನಸಹಾಯ 16000 ಸಾವಿರವನ್ನು ಮರ್ಧಾಳ ಗ್ರಾ.ಪಂ ಅಧ್ಯಕ್ಷೆ ಲಲಿತಾ ರೈ ಮೈಕಾಜೆ ಲಿಂಗಪ್ಪ ಗೌಡರಿಗೆ ವಿತರಿಸಿದರು ಈ ಸಂದರ್ಭದಲ್ಲಿ ತನು ಚಾರಿಟೇಬಲ್ ಟ್ರಸ್ಟ್ ನ ಮಂಜುನಾಥ ಕೋಲಂತ್ತಾಡಿ, ಮರ್ಧಾಳ ತರಯಿಲ್ ಟ್ರೇಡರ್ಸ್ ಮಾಲಕ ಬಾಬು, ಪರಮೇಶ್ವರ ಮರ್ಧಾಳ, ವಿಶ್ವನಾಥ ಪೂಜಾರಿ, ಸನ್ಸಾರ್ ಟ್ರೇಡರ್ಸ್ ಮಾಲಕರಾದ ಮೋನು ಮುಂತಾದವರು ಉಪಸ್ಥಿತರಿದ್ದರು. ಲಿಂಗಪ್ಪ ಗೌಡರ ಮೊಬೈಲ್ ಸಂಖ್ಯೆ: 9482635752 ಸಹಾಯ ಮಾಡುವವರು ಲಿಂಗಪ್ಪ ಗೌಡರ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬಹುದು.
Bank: Vijaya Bank
Branch: Mardala
Ac.No.: 155001011000137
IFSC Code: VIJB0001550

 

Also Read  ನೂಜಿಬಾಳ್ತಿಲ: ಗಾಂಧಿಜಯಂತಿ ದಿನಾಚರಣೆ ► ಸ್ವಚ್ಚತಾ ಕಾರ್ಯಕ್ರಮ
error: Content is protected !!
Scroll to Top