ಎಫ್ಐಎಚ್ ಹಾಕಿ ಸೀರಿಸ್➤ಸೆಮಿಫೈನಲ್ ನಲ್ಲಿ ಭಾರತ

(ನ್ಯೂಸ್ ಕಡಬ) newskadaba.com ಭುವನೇಶ್ವರ, ಜೂನ್.13.ಎಫ್ಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ ಪಂದ್ಯಗಳನ್ನು ಜಯಿಸಿ 9 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿ ಎನಿಸಿದೆ.

ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಈ ಸಾಧನೆ ಸಾಧ್ಯವಾಯಿತು.ಸೋಮವಾರ ರಾತ್ರಿಯ ಪಂದ್ಯದಲ್ಲಿ ಭಾರತ ಆರಂಭದಿಂದಲೂ ಅಬ್ಬರದ ಆಟಕ್ಕಿಳಿಯಿತು. ವರುಣ್‌ 4ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ಆಕಾಶ್‌ದೀಪ್‌ 11ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಂತರವನ್ನು ಹೆಚ್ಚಿಸಿದರು.15ನೇ ನಿಮಿಷದಲ್ಲಿ ಅಮಿತ್‌, 22ನೇ ನಿಮಿಷದಲ್ಲಿ ವರುಣ್‌, 26ನೇ ನಿಮಿಷದಲ್ಲಿ ಆಕಾಶ್‌ದೀಪ್‌, ಗೋಲು ಸಿಡಿಸಿದರು.

Also Read  ಇಚ್ಲಂಪಾಡಿ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ಮೆರವಣಿಗೆ

27ನೇ ನಿಮಿಷದಲ್ಲಿ ನೀಲಕಂಠ, 30ನೇ ನಿಮಿಷದಲ್ಲಿ ಮನ್‌ದೀಪ್‌, 45ನೇ ನಿಮಿಷದಲ್ಲಿ ಗುರುಸಾಹಿಬ್‌ಜಿತ್‌, 53ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಹಾಗೂ 60ನೇ ನಿಮಿಷದಲ್ಲಿ ಮನ್‌ದೀಪ್‌ ಗೋಲು ಸಿಡಿಸಿದರು. ಭಾರತ ಮೊದಲ ಪಂದ್ಯದಲ್ಲಿ ರಶ್ಯ ವಿರುದ್ಧ 10-0, ಪೋಲೆಂಡ್‌ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿತ್ತು. ಎದುರಾಳಿಯ ಮೇಲೆ ಮನಬಂದಂತೆ ದಾಳಿ ನಡೆಸಿ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು.

 

error: Content is protected !!
Scroll to Top