ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.12. ವಿದ್ಯುತ್ ಶಾಕ್ ಗೆ ತುತ್ತಾಗಿ ಲೈನ್ ಮ್ಯಾನ್ ಓರ್ವರು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಬೇರಿಕೆ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮೃತ ಲೈನ್ ಮ್ಯಾನ್‌ ನನ್ನು ಮೂಲತಃ ದಾವಣಗೆರೆ ನಿವಾಸಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಿಟ್ಯಾ ನಾಯಕ್(35) ಎಂದು ಗುರುತಿಸಲಾಗಿದೆ. ಬುಧವಾರದಂದು ಮೈನ್ ಲೈನ್ ದುರಸ್ಥಿಯ ಹಿನ್ನಲೆಯಲ್ಲಿ ಬೇರಿಕೆ ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಿದ್ದು, ಸಂಜೆ ವೇಳೆಗೆ ದುರಸ್ತಿ ಮುಗಿಸಿ ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ನೀಡುತ್ತಿದ್ದಂತೆ ಮಿಟ್ಯಾ ನಾಯಕ್ ಅವರು ವಿದ್ಯುತ್ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಆ ವೇಳೆ ಸಹೋದ್ಯೋಗಿ ಸಾರ್ವಜನಿಕರ ಸಹಕಾರದಲ್ಲಿ 108 ಆ್ಯಂಬುಲೆನ್ಸ್ ಮೂಲಕ‌ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಗಂಭೀರ ಗಾಯಗೊಂಡಿದ್ದ ಮಿಟ್ಯಾ ನಾಯಕ್ ಆಗಲೇ ಮೃತಪಟ್ಟಿದ್ದರು. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ➤ ಆರು ಮಂದಿ ಗೆಲುವು

error: Content is protected !!
Scroll to Top