ಬಂಟ್ವಾಳ: ವಿದ್ಯುತ್ ತಂತಿ ತುಳಿದು ತಂದೆ, ಮಗಳು ಸ್ಥಳದಲ್ಲೇ ಮೃತ್ಯು ➤ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ವೇಳೆ ದುರ್ಘಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ‌.11. ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ವೇಳೆ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದು ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತರನ್ನು ವಾಮದಪದವು ಸಮೀಪದ ಬಾರಕಿನಡಿ ನಿವಾಸಿ ಗೋಪಾಲಕೃಷ್ಣ (63), ಹಾಗೂ ಅವರ ಪುತ್ರಿ ದಿವ್ಯಾಶ್ರೀ (32) ಎಂದು ಗುರುತಿಸಲಾಗಿದೆ. ತಂದೆ ತನ್ನ ಮಗಳೊಂದಿಗೆ ಹುಲ್ಲು ತರಲೆಂದು ಮಂಗಳವಾರ ಸಂಜೆ ತೋಟಕ್ಕೆ ತೆರಳಿದ್ದು, ಈ ವೇಳೆ ತೋಟದಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕ ತುಳಿದು ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ರಶ್ಮಿ ಎಸ್.ಆರ್., ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್, ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ, ಸಬ್ ಇನ್ಸ್‌ಪೆಕ್ಟರ್ ಸುಧಾಕರ ತೋನ್ಸೆ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ನೆಲ್ಯಾಡಿ: ಸುರಿದ ಭಾರೀ ಮಳೆಗೆ ಮನೆಗೆ ಹಾನಿ

error: Content is protected !!
Scroll to Top