ಪ್ಯಾರಿಸ್ ರಾಣಿ ಆ್ಯಶ್ಲಿ ಬಾರ್ಟಿ➤ ವೊಂಡ್ರೂಸೋವಾ ವಿರುದ್ಧ ಜಯ

(ನ್ಯೂಸ್ ಕಡಬ) newskadaba.com  ಪ್ಯಾರಿಸ್, ಜೂನ್.10. ಶನಿವಾರದ ಫೈನಲ್‌ನಲ್ಲಿ ಪ್ಯಾರಿಸ್‌ ರಾಣಿ ಆ್ಯಶ್ಲಿ ಬಾರ್ಟಿ ಮಾರ್ಕೆಟಾ ವೊಂಡ್ರೂಸೋವಾ ವಿರುದ್ಧ 6-1, 6-3 ಅಂತರದ ಸುಲಭ ಜಯ ಒಲಿಸಿ ಕೊಂಡರು. ಇವರಿಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ಆಗಿತ್ತು.

ನೊವಾಕ್‌ ಜೊಕೋವಿಕ್‌ ಅವರನ್ನು 5 ಸೆಟ್‌ಗಳ ಹೋರಾಟದಲ್ಲಿ ಪರಾಭವಗೊಳಿಸಿದ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಥೀಮ್‌ ಗೆಲುವಿನ ಅಂತರ 6-2, 3-6, 7-5, 5-7, 7-5. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯ ಶನಿವಾರ ಮುಂದುವರಿದಿತ್ತು.

Also Read  ದರ್ಬೆ ಬೈಪಾಸ್ ಬಳಿ ಅಪಘಾತ ಪ್ರಕರಣ ➤ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

error: Content is protected !!
Scroll to Top