ಭಾರತದ ಅಗ್ರ ಬಾಕ್ಸಿಂಗ್ ಪಟು ಜತೆ ನೂತನ ಕ್ರೀಡಾ ಮಂತ್ರಿ

(ನ್ಯೂಸ್ ಕಡಬ) newskadaba.com ದೆಹಲಿ, ಜೂನ್.5.ನೂತನ ಕ್ರೀಡಾ ಮಂತ್ರಿ ಕಿರಣ್​​ ರಿಜಿಜು ಅವರು ಆರು ಬಾರಿ ವಿಶ್ವ ಚಾಂಪಿಯನ್​​ ಭಾರತದ ಅಗ್ರ ಬಾಕ್ಸಿಂಗ್​​ ಪಟು ಮೇರಿ ಕೋಮ್​​​ ಜತೆ ಬಾಕ್ಸಿಂಗ್​​​ ಪ್ರದರ್ಶನ ತೋರುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.

ಮಂಗಳವಾರದಂದು ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ರಿಜಿಜು ಅವರು ಬಾಕ್ಸಿಂಗ್​​​ ಕೈಚೀಲಗಳನ್ನು ಧರಿಸಿ ಮೇರಿಕೋಮ್​​​​ ಅವರೊಂದಿಗೆ ಬಾಕ್ಸಿಂಗ್​​ ಆಡುವ ರೀತಿಯಲ್ಲಿ ಪೋಟೋಗೆ ಪೋಸ್​​ ನೀಡಿದ್ದಾರೆ. ಬಳಿಕ ಕ್ರೀಡಾಂಗಣದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದರು. ನಂತರ ಕ್ರೀಡಾ ಅಧಿಕಾರಿಗಳೊಂದಿಗೆ ಖೇಲೋ ಇಂಡಿಯಾ ಹಾಗೂ 2020ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಂಪಿಕ್ಸ್​ನಲ್ಲಿ ಭಾರತ ಕ್ರೀಡಾಪಟುಗಳು ಹೇಗೆ ಸ್ಪರ್ಧಿಸಬೇಕು ಎಂದು ಚರ್ಚೆ ನಡೆಸಿದರು.

Also Read  ಮಂಗಳೂರು: ಬೋಟ್ ನಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಯುವಕ ಮೃತ್ಯು

 

 

 

error: Content is protected !!
Scroll to Top