(ನ್ಯೂಸ್ ಕಡಬ) newskadaba.com ಕಡಬ, ಜೂ.05. ಇಲ್ಲಿನ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದ ಸಮೀಪದ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ರುಂಡ – ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಬುಧವಾರದಂದು ಪತ್ತೆಯಾಗಿದೆ.
ರೈಲ್ವೇ ನಿಲ್ದಾಣದಿಂದ ಅನತಿ ದೂರದಲ್ಲಿ ಮೃತದೇಹವು ಕಂಡುಬಂದಿದ್ದು, ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸ್ಥಳೀಯ ವ್ಯಕ್ತಿಯೋರ್ವರು ಬುಧವಾರದಂದು ಬೆಳಿಗ್ಗೆ ರೈಲ್ವೇ ಮಾರ್ಗದಲ್ಲಿ ತೆರಳುತ್ತಿದ್ದಾಗ ಅಪರಿಚಿತ ಮೃತದೇಹ ಕಂಡುಬಂದಿದ್ದು, ಅವರು ರೈಲ್ವೇ ನಿಲ್ದಾಣದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
Also Read ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಮತ್ತು ಜೀವನದಲ್ಲಿ ನೆಮ್ಮದಿ ಸಿಗಬೇಕು ಅಂದರೆ ತಪ್ಪದೇ ಈ ನಿಯಮ ಪಾಲಿಸಿ