108 ಆಂಬ್ಯುಲೆನ್ಸ್ ಡೋರ್ ಲಾಕ್ ► ಹೊರಗೆ ಬರಲಾಗದೆ ಪರದಾಡಿದ ರೋಗಿ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.06. 108 ಅಂಬುಲೆನ್ಸೊಂದರ ಡೋರ್ ಓಪನ್ ಆಗದ ಕಾರಣ ರೋಗಿ ಹಾಗೂ ರೋಗಿಯ ಸಂಬಂಧಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಅಂಬುಲೆನ್ಸ್ ಒಳಗೆ ಪರದಾಡಿದ ಘಟನೆ ಚಾಮರಾಜನಗರದಲ್ಲಿ ಶನಿವಾರದಂದು ನಡೆದಿದೆ.

ಕೂಲಿ ಕೆಲಸದ ಸಂದರ್ಭದಲ್ಲಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸಿಗೆ ಕರೆ ಮಾಡಲಾಗಿ ರೋಗಿಯನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆಸ್ಪತ್ರೆಗೆ ತಲುಪಿ ಹೊರಬರಲೆಂದು ಡೋರ್ ತೆಗೆಯುವಾಗ ಡೋರ್ ಲಾಕ್ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಡೋರ್ ಓಪನ್ ಆಗಲಿಲ್ಲ. ಅಂಬುಲೆನ್ಸ್ ಒಳಗಿದ್ದ ರೋಗಿಯ ಹೊಟ್ಟೆ ಭಾಗದಲ್ಲಿ ಗಾಯಗಳಾಗಿದ್ದು ತೀವ್ರವಾಗಿ ರಕ್ತ ಸ್ರಾವವಾಗುತ್ತಿತ್ತು. ಹೀಗಾಗಿ ಇದನ್ನು ಕಂಡು ರೋಗಿಯ ಸಂಬಂಧಿಕರು ಹಾಗೂ ಸ್ಥಳೀಯರು ಸುಮಾರು ಅರ್ಧ ಗಂಟೆಯಷ್ಟು ಪರಿಶ್ರಮ ಪಟ್ಟು ರಾಡ್ ಹಾಗೂ ಸುತ್ತಿಗೆ ಉಪಯೋಗಿಸಿ ಅಂಬುಲೆನ್ಸ್ ಬಾಗಿಲನ್ನು ಒಡೆದು ತೆರೆದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!
Scroll to Top