ಸಂಪಾಜೆ: ಕಾರಿಗೆ ಸೈಡ್ ಬಿಟ್ಟು ಕೊಟ್ಟಿಲ್ಲವೆಂಬ ಆರೋಪ ➤ ಕೆಎಸ್ಸಾರ್ಟಿಸಿ ಚಾಲಕ – ನಿರ್ವಾಹಕರಿಗೆ ಮೂವರಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.02. ಕಾರಿಗೆ ಸೈಡ್ ಬಿಟ್ಟು ಕೊಡಲಿಲ್ಲ ಎಂದು ಆರೋಪಿಸಿ ಕೆಎಸ್ಸಾರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮೂವರು ಹಲ್ಲೆ ನಡೆಸಿದ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪಾಜೆ ಬಳಿ ಶನಿವಾರದಂದು ಸಂಭವಿಸಿದೆ.

ಸುಳ್ಯ ಗೂನಡ್ಕ ನಿವಾಸಿಗಳಾದ ಕಿಶನ್, ಸಚಿನ್ ಹಾಗೂ ಲತೀಶ್ ಎಂಬವರು ತಮ್ಮ ಕಾರಿನಲ್ಲಿ ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದಾಗ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ವೇಗದೂತ ಬಸ್ ಸಂಪಾಜೆ ಚಡಾವು ಎಂಬಲ್ಲಿ ಕಾರಿಗೆ ಸೈಡ್ ಬಿಟ್ಟು ಕೊಟ್ಟಿಲ್ಲವೆನ್ನಲಾಗಿದೆ‌. ಈ ಕಾರಣದಿಂದ ಆರೋಪಿಗಳು ಚಾಲಕ ಹಾಗೂ ನಿರ್ವಾಹಕನಿಗೆ ಹಲ್ಲೆ ನಡೆಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೈಕಂಪಾಡಿ ಟ್ರಕ್ ಟರ್ಮಿನಲ್ ಕಾಮಗಾರಿಗೆ ಶೀಘ್ರ ಚಾಲನೆ ► ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್

error: Content is protected !!
Scroll to Top