ಪುರಸಭಾ ಸದಸ್ಯೆಯಾಗಿ ಆಯ್ಕೆಯಾದ ಕಾಲೇಜು ವಿದ್ಯಾರ್ಥಿನಿ ➤ ಅಂತಿಮ ಬಿಎ ಓದುತ್ತಲೇ ಚುನಾವಣೆಗೆ ಸ್ಪರ್ಧಿಸಿ ಗೆಲುವು

(ನ್ಯೂಸ್ ಕಡಬ) newskadaba.com ಮಾಲೂರು, ಜೂ.01. ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ತನ್ನ ಪ್ರತಿಸ್ಪರ್ಧಿ ವಿರುದ್ಧ ಭಾರೀ ಮತಗಳ ಅಂತರದಿಂದ ಗೆಲ್ಲುವ ಮೂಲಕ ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ.

ಮಾಲೂರು ಪಟ್ಟಣದ 27ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ಸುಮಿತ್ರಾ ಪಿ.(19) ಜಯ​ಗ​ಳಿ​ಸಿದಾಕೆ. ತನ್ನ ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ ಈ ಬಾರಿ ಅದೃಷ್ಟ ಪರೀಕ್ಷೆಗಿಳಿದ ಸುಮಿತ್ರಾ ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು 121 ಮತಗಳ ಅಂತರದಿಂದ ಸೋಲಿ​ಸಿ​ದ್ದಾರೆ. ಪುರಸಭೆ ಸದಸ್ಯರಾಗಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕೆಂಬ ನಿಯಮವಿದ್ದರೂ, ನಾಮಪತ್ರ ಪರಿಶೀಲನೆಯಲ್ಲಿ ಲೋಪವುಂಟಾಗಿ 19 ವರ್ಷದ ವಿದ್ಯಾರ್ಥಿನಿ ಚುನಾವಣೆಗೆ ಸ್ಪರ್ಧಿಸಿ ತನ್ನ ಎದುರಾಳಿಯನ್ನು ಸೋಲಿಸಿದ್ದಾರೆ.

Also Read  ಮಂಗಳೂರು: ವಿದ್ಯಾರ್ಥಿ‌ನಿಯ ಜೀವ ರಕ್ಷಣೆ ಮಾಡಿದ ಚಾಲಕ ನಿರ್ವಾಹಕರಿಗೆ ಸನ್ಮಾನ

error: Content is protected !!
Scroll to Top