(ನ್ಯೂಸ್ ಕಡಬ) newskadaba.com ಕಡಬ, ಆ.05. ಗುಡ್ಡದ ಬದಿಯಲ್ಲಿದ್ದ ಹಟ್ಟಿಯೊಂದರ ಮೇಲೆ ಗುಡ್ಡ ಜರಿದು 4 ದನಗಳು ದಾರುಣವಾಗಿ ಸಾವಿಗೀಡಾದ ಘಟನೆ ಶನಿವಾರದಂದು ಪುತ್ತೂರು ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕುಡಾಲ ಎಂಬಲ್ಲಿ ನಡೆದಿದೆ.
ಕುಡಾಲ ನಿವಾಸಿ ಕೃಷಿಕ ಸುಭಾಶ್ಚಂದ್ರ ಎಂಬವರು ತನ್ನ ಮನೆಯ ಪಕ್ಕದಲ್ಲೇ ಹಟ್ಟಿ ನಿರ್ಮಿಸಿ ಹೈನುಗಾರಿಕೆ ನಡೆಸುತ್ತಿದ್ದರು. ಶನಿವಾರದಂದು ಸಂಜೆ ಸುರಿದ ಮಳೆಗೆ ಗುಡ್ಡ ಜರಿದು ಹಟ್ಟಿಯ ಮೇಲೆ ಬಿದ್ದ ಪರಿಣಾಮ 3 ದನ, 3 ಕರುಗಳು ಮಣ್ಣಿನಡಿಯಲ್ಲಿ ಬಾಕಿಯಾಗಿದ್ದವು. ಜೆಸಿಬಿ ಮೂಲಕ ಮಣ್ಣನ್ನು ಸರಿಸಲಾಯಿತಾದರೂ, 1 ದನವನ್ನು ಮಾತ್ರ ಜೀವಂತ ಉಳಿಸಲು ಸಾಧ್ಯವಾಯಿತು. ಸುದ್ದಿ ತಿಳಿದ ತಕ್ಷಣ ಸ್ಥಳಿಯರು ಜೇಸಿಬಿ ಮುಖಾಂತರ ಒಂದುವರೆ ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಮಣ್ಣಿನಡಿ ಸಿಳುಕಿದ ದನಗಳ ಕಳೆಬರವನ್ನು ಹೊರತೆಗಿದಿದ್ದಾರೆ. ಘಟನೆಯಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ನಷ್ಟವುಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ. ಕಾರ್ತಿಕ್, ಸಿಬ್ಬಂದಿ ಮಂಜುನಾಥ, ಮರ್ದಾಳ ಹಾಲು ಉತ್ಪಾದÀಕರ ಸಂಘದ ಅಧ್ಯಕ್ಷ ಮನೋಹರ ರೈ, ನಿರ್ದೇಶಕ ತಿರುಮಲೇಶ್ ಕೊಲ್ಯ, ಕಾರ್ಯದರ್ಶಿ ರಾಧಕೃಷ್ಣ , ಮರ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ, ಸದಸ್ಯರಾದ ಹರೀಶ್ ಕೋಡಂದೂರು, ಮೀನಾಕ್ಷಿ ಆಚಾರ್ಯ, ದಾಮೋಧರ ಡೆಪ್ಪುಣಿ, ಸುಲೈಮಾನ್, ಸಿಬ್ಬಂದಿಗಳಾದ ಭುವನೇಂದ್ರ, ವಿನುತ್, ಹಸನ್, ಆಶಾ, ಐತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಯೂಸುಫ್ ಮೊದಲಾದವರು ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ.