ನಾಳೆ (ಮೇ.31) ಕಡಬದಲ್ಲಿ ‘ನ್ಯೂ ಅಶ್ವಿನಿ ಟ್ರೇಡರ್ಸ್’ ಸುಸಜ್ಜಿತ ಇಲೆಕ್ಟ್ರಾನಿಕ್ ಮಳಿಗೆ ಶುಭಾರಂಭ ➤ 2 ದಶಕಗಳಿಂದ ಉಪ್ಪಿನಂಗಡಿಯಲ್ಲಿ ಜನಮನ್ನಣೆ ಗಳಿಸಿ ಇದೀಗ ಕಡಬಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.30. ಸುಮಾರು ಎರಡು ದಶಕಗಳಿಂದ ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಉಪ್ಪಿನಂಗಡಿಯಲ್ಲಿ ಗ್ರಾಹಕರ ಜನಮನ್ನಣೆಯನ್ನು ಗಳಿಸಿ ತೃಪ್ತಿದಾಯಕ ಸೇವೆಯನ್ನು ನೀಡುತ್ತಾ ಬಂದಿರುವ ‘ನ್ಯೂ ಅಶ್ವಿನ್ ಟ್ರೇಡರ್ಸ್’ ಇದೀಗ ಕಡಬಕ್ಕೆ ಕಾಲಿಟ್ಟಿದ್ದು, ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ನವೀಕೃತಗೊಂಡು ನಾಳೆ (ಮೇ.31) ಶುಭಾರಂಭಗೊಳ್ಳಲಿದೆ.

ಕಡಬದ ಅನುಗ್ರಹ ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿರುವ ಈ ನೂತನ ಮಳಿಗೆಯನ್ನು ಉಪ್ಪಿನಂಗಡಿಯ ಅಶ್ವಿನಿ ಹೋಮ್ ಅಪ್ಲಯನ್ಸ್ ಮಾಲಕರಾದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಬಿ. ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಿದ್ದಾರೆ‌. ಮುಖ್ಯ ಅತಿಥಿಗಳಾಗಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ತಮ್ಮಯ್ಯ ಗೌಡ, ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರುಗಳಾದ ರೆ| ಫಾ| ರೊನಾಲ್ಡ್ ಲೋಬೊ, ಕಡಬ ಟೌನ್ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಪಿ.ಎಂ. ಇಬ್ರಾಹಿಂ ದಾರಿಮಿ ಭಾಗವಹಿಸಲಿದ್ದಾರೆ.

ನೂತನ ಮಳಿಗೆಯಲ್ಲಿ ಎಲ್ಲಾ ವಿಧದ ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ವಸ್ತುಗಳು, ಸೋಲಾರ್, ಇನ್ವರ್ಟರ್ ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಗಣೇಶ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448623558 ಅಥವಾ 9036964559 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!

Join the Group

Join WhatsApp Group