ಮಂಗಳೂರು: ಎಂಟು ತಿಂಗಳ ಹಸುಳೆಯನ್ನು ಹತ್ಯೆಗೈದ ತಂದೆ ➤ ಕತ್ತು ಹಿಸುಕಿ ಕೊಂದು ನದಿಗೆ ಬಿಸಾಡಿದ ಪಾಪಿ ➤ ಕಾರಣ ಕೇಳಿದರೆ ಶಾಕ್ ಆಗ್ತೀರಾ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. ಸ್ವತಃ ತಂದೆಯೇ ಎಂಟು ತಿಂಗಳ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಲೆಗೈದು ಮೃತದೇಹವನ್ನು ನೇತ್ರಾವತಿ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಸೋಮವಾರದಂದು ನಡೆದಿದ್ದು, ಬುಧವಾರದಂದು ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಕೊಪ್ಪಳ ನಿವಾಸಿ ಪ್ರಸ್ತುತ ಬೋಳಾರದಲ್ಲಿ ವಾಸವಿರುವ ಲಕ್ಷ್ಮಣ ತೆಂಗಿನಹಾಳ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಲಕ್ಷ್ಮಣ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೋಮವಾರದಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದನು.

ಪತ್ನಿ ರೂಪಾಶ್ರೀ ಎಂಟು ತಿಂಗಳ ಮಗುವನ್ನು ಬೆಳಗ್ಗೆ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದರು. ರೂಪಾ ಸಂಜೆ ಮನೆಗೆ ಬಂದ ವೇಳೆ ಮಗು ಇಲ್ಲದಿದ್ದರಿಂದ ವಿಚಾರಿಸಿದಾಗ, ತಾನು ಸುಮಾರು 11 ಗಂಟೆಯ ವೇಳೆಗೆ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಹೊರಗೆ ಹೋಗಿದ್ದು ಮಧ್ಯಾಹ್ನ 12:15ಕ್ಕೆ ಮರಳಿ ಬಂದಾಗ ಮಗು ಕಾಣೆಯಾಗಿತ್ತು ಎಂದು ಆರೋಪಿಯು ಪತ್ನಿಯನ್ನು ನಂಬಿಸಿದ್ದನು. ಮಗುವಿಗಾಗಿ ಹುಡುಕಾಡುತ್ತಿದ್ದಾಗ ಬೋಳಾರ ಬದಿಯ ನೇತ್ರಾವತಿ ನದಿ ದಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.

Also Read  ಭಾರತದಲ್ಲಿ ಇದೇ ಮೊದಲು ಅನ್ನದಾತರಿಗಾಗಿ ರೈತರ ಶಾಲೆ ಆರಂಭ

ಮಗುವಿನ ಹಣೆಯ ಎರಡೂ ಬದಿ ತರಚಿದ ಗಾಯ, ಮೂಗಿನ ಬದಿ ಉಗುರಿನ ಗಾಯದ ಗುರುತುಗಳಿರುವುದು ಕಂಡು ಮಗುವಿನ ತಂದೆ ಲಕ್ಷ್ಮಣನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯಿ ಬಿಟ್ಟಿದ್ದು, ತಾನೇ ಉಸಿರು ಕಟ್ಟಿಸಿ ಸಾಯಿಸಿ ನದಿ ನೀರಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳನ್ನು ಕಂಡರೆ ಬಹಳಷ್ಟು ತಾತ್ಸಾರ ಹೊಂದಿದ್ದರಿಂದ ಪುತ್ರಿಯನ್ನು ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಹಿರಿಯ ಪುತ್ರಿಗೆ ಆತ ಬಹಳಷ್ಟು ಹೊಡೆಯುತ್ತಿದ್ದ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ.

Also Read  ಕಡಬ : ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

error: Content is protected !!
Scroll to Top