ಲೀಚಿ ಹಣ್ಣಿನಲ್ಲಿದೆ ವಿಶೇಷ ಔಷಧೀಯ ಅಂಶ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ.ಬೇಸಿಗೆಯಲ್ಲಿ ದೊರೆಯುವ ಈ  ಲೀಚಿ ಹಣ್ಣು ಅನೇಕ ಆರೋಗ್ಯ ಅನುಕೂಲಕಾರಿ ಗುಣಗಳಿಂದ ಭರಿತವಾಗಿದೆ. ಹೊರಗಡೆಯಿಂದ ಒರಟಾದ ಪದರವನ್ನು ಹೊಂದಿರುತ್ತದೆ. ಒಳಗಡೆ ಹಣ್ಣಿನ ಮೃದುವಾದ ಭಾಗ ಇರುತ್ತದೆ. ಚೀನಾದಲ್ಲಿ ಔಷಧೀಯ ಪದಾರ್ಥವಾಗಿಯೂ ಲೀಚಿಯನ್ನು ಉಪಯೋಗಿಸಲಾಗುತ್ತದೆ.ಲೀಚಿಯು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಸಂಯುಕ್ತಗಳನ್ನು ಹೊಂದಿದೆ.

ರಕ್ತದ ಉತ್ಪಾದನೆಗೆ ಬೇಕಾದಂತಹ ಅನೇಕ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ದೇಹದಲ್ಲಿ ಸೋಡಿಯಂನ ಪ್ರಮಾಣವನ್ನು ನಿರ್ವಹಣೆ ಮಾಡಲು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು, ರಕ್ತನಾಳಗಳ ಆರೋಗ್ಯಕ್ಕೆ, ಹೃದಯಸ ಸ್ವಾಸ್ಥ್ಯ್ಕೆ ಈ ಹಣ್ಣಿನಲ್ಲಿನ ಪೊಟ್ಯಾಷಿಯಂ ಸಹಾಯ ಮಾಡುತ್ತದೆ. ಪಾರ್ಶ್ವವಾಯು ಹಾಗೂ ಹೃದಯಾಘಾತ ಆಗುವ ಸಂಭವವನ್ನು ಕಡಿಮೆ ಮಾಡಲು ಲೀಚಿ ಅನುಕೂಲಕಾರಿ. ಪ್ರೀರ್ಯಾಡಿಕಲ್ಸ್ ನಿಂದಾಗುವ ಹಾನಿಯನ್ನು ಕಡಿಮೆ ಮಾಡಲು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.ಆರ್ಥರೈಟಿಸ್ ಹಾಗೂ ಡಿಜನರೇಟಿವ್ ತೊಂದರೆಗಳು, ರೋಗಗಳಿಂದ ರಕ್ಷಿಸಲು ಲೀಚಿ ಸಹಾಯ ಮಾಡುತ್ತದೆ.

Also Read  ಮಂಗಳೂರಿನಲ್ಲಿ ವಿವಾದಿತ ಗೋಡೆ ಬರಹ ಪ್ರಕರಣ ➤ ಓರ್ವ ಆರೋಪಿ ನಝೀರ್ ಮುಹಮ್ಮದ್ ಬಂಧನ

ಸರಾಗ ಮಲವಿಸರ್ಜನೆಗೆ ಅನುಕೂಲ ಮಾಡಿಕೊಡುತ್ತದೆ. ಅಸ್ತಮಾದಿಂದ ರಕ್ಷಿಸಲು ಲೀಚಿಹಣ್ಣಿನ ಸೇವನೆ ಪರಿಣಾಮಕಾರಿ. ಒಂದು ಕಪ್ ಲೀಚಿಹಣ್ಣು ಒಂದು ದಿನಕ್ಕೆ ಸಾಕಾಗುವಷ್ಟು ಸಿ ವಿಟಮಿನ್ ಹೊಂದಿದೆ. ರಕ್ತನಾಳಗಳನ್ನು ಬಲಗೊಳಿಸುವಂತಹ ಅಂಶಗಳ ಜೊತೆ ಆಂಟಿ ವೈರಲ್ ಗುಣಗಳು ಲೀಚಿಗಿವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯ ಹೆಚ್ಚಳಕ್ಕೆ, ಅರಿವಿನ ಉದ್ದೀಪನಕ್ಕೆ ಲೀಚಿ ಸಹಕಾರಿ. ಮ್ಯಾಂಗನೀಸ್, ಮೆಗ್ನೇಷಿಯಂ, ತಾಮ್ರ, ಕಬ್ಬಿಣ ಇವೆಲ್ಲವುಗಳನ್ನು ಕೂಡ ಹೊಂದಿರುವುದು ವಿಶೇಷ. ಅಧಿಕ ಪ್ರಮಾಣದಲ್ಲಿ ನಾರಿನಂಶವನ್ನು ಹೊಂದಿದೆ.ಬೇಗನೆ ವಯಸ್ಸಾಗುವುದನ್ನು ನಿಧಾನವಾಗಿಸಲು ಲೀಚಿ ಸೇವನೆಯು ಸಹಕಾರಿ.

error: Content is protected !!
Scroll to Top