(ನ್ಯೂಸ್ ಕಡಬ) newskadaba.com ಕಡಬ, ಮೇ.29. ಅತ್ಯಾಧುನಿಕ ತಂತ್ರಜ್ಞಾನದ ಶುದ್ಧ ಕೊಬ್ಬರಿ ಎಣ್ಣೆ ಹಾಗೂ ಅಕ್ಕಿ, ಗೋಧಿ ಹುಡಿ ಮಾಡುವ ನೂತನ ಘಟಕ ‘ಮಣಿಮಲ ಮಿಲ್ ಇಂಡಸ್ಟ್ರೀಸ್’ ಕಡಬ – ಮರ್ಧಾಳ ನಡುವಿನ ನೆಕ್ಕಿತ್ತಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿ ಶುಭಾರಂಭಗೊಂಡಿತು.

ಸಂಸ್ಥೆಯಲ್ಲಿ ನೂತನ ತಂತ್ರಜ್ಞಾನದೊಂದಿಗೆ ಕ್ಲಪ್ತ ಸಮಯದಲ್ಲಿ ಕೊಬ್ಬರಿಯನ್ನು ಎಣ್ಣೆ ಮಾಡಿಕೊಡಲಾಗುವುದು. ಅಕ್ಕಿ, ಗೋಧಿ, ರಾಗಿ, ಅರಿಶಿನ, ಕೊತ್ತಂಬರಿ, ಮೆಣಸು ಮೊದಲಾದ ಸಾಂಬಾರ್ ವಸ್ತುಗಳನ್ನು ಹುಡಿ ಮಾಡಿಕೊಡಲಾಗುವುದು. ಶುದ್ಧ ತೆಂಗಿನ ಎಣ್ಣೆ ಹಾಗೂ ಮಸಾಲ ಹುಡಿಗಳನ್ನು ಮಾರಾಟ ಮಾಡಲಾಗುವುದು. ತೆಂಗಿನಕಾಯಿಗಳನ್ನು ಹಾಗೂ ಕೊಬ್ಬರಿಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದಲ್ಲದೆ ಕಚ್ಛಾವಸ್ತುಗಳನ್ನು ಒಣಗಿಸುವ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9741947192 ಅಥವಾ 7338091924 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
