ಬೆಳ್ತಂಗಡಿ ಐಟಿಐ ಶಿಕ್ಷಕನ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ➤ ಕೊಲೆ ನಡೆದು 24 ಗಂಟೆಗಳಲ್ಲಿ ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.28. ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ, ಮಾಲಾಡಿ ಐಟಿಐನ ಉಪನ್ಯಾಸಕ ವಿಕ್ರಮ್ ಜೈನ್ ರನ್ನು ರಸ್ತೆ ಮಧ್ಯದಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಆರೋಪಿಗಳನ್ನು ಘಟನೆ ನಡೆದು 24 ಗಂಟೆಗಳೊಳಗಾಗಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮುಂಡೂರು ನಿವಾಸಿಗಳಾದ ರವಿ ಪೂಜಾರಿ ಎಂಬವರ ಪುತ್ರ ನಾಗೇಶ್ ಪೂಜಾರಿ(32) ಹಾಗೂ ಡೊಂಬ ಎಂಬವರ ಪುತ್ರ ಡೀಕಯ್ಯ(39) ಎಂದು ಗುರುತಿಸಲಾಗಿದೆ. ಆರೋಪಿಗಳು ರೈಲಿನಲ್ಲಿ ಮುಂಬಯಿಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು. ಕೊಲೆ ಆರೋಪಿಗಳ ಪೈಕಿ ಒಬ್ಬನಿಗೆ ಆತನ ಹತ್ತಿರ ಸಂಬಂಧಿ ಮಹಿಳೆಯೊಬ್ಬರ ವಿಚಾರವಾಗಿ ಮೃತನೊಂದಿಗೆ ದ್ವೇಷವಿದ್ದು ಹಾಗೂ ಇನ್ನೋರ್ವ ಆರೋಪಿಗೆ ರಸ್ತೆ ವಿಚಾರವಾಗಿ ಮೃತನೊಂದಿಗೆ ದ್ವೇಷವಿದ್ದ ಕಾರಣ ಇಬ್ಬರು ಕೊಲೆ ಮಾಡುವ ಸಮಾನ ಉದ್ದೇಶದಿಂದ ರಾತ್ರಿ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿಗೆ ವಿಕ್ರಮ್‌ ಜೈನ್‌ ರವರನ್ನು ಬರಹೇಳಿದ್ದು ಆರೋಪಿಗಳು ಮೃತ ವ್ಯಕ್ತಿಗೆ ತೀರಾ ಪರಿಚಿತರಾಗಿದ್ದು ನೆರೆಹೊರೆಯವರಾಗಿರುವುದರಿಂದ ವಿಕ್ರಮ್‌ ಜೈನ್‌ ರವರು ಸ್ಥಳಕ್ಕೆ ತೆರಳಿರುತ್ತಾರೆ. ಆ ಸಮಯದಲ್ಲಿ ಆರೋಪಿಗಳು ಚಾಕು ಹಾಗೂ ತಲವಾರುಗಳಿಂದ ಚುಚ್ಚಿ ಕಡಿದು ಕೊಲೆ ಮಾಡಿರುವುದಾಗಿ ತನಿಖೆಯ ವೇಳೆ ತಿಳಿದುಬಂದಿದೆ.

Also Read  ಮಂಗಳೂರಿನ ಜ್ಯೋತಿ ಫಿಲ್ಮ್ ಥಿಯೇಟರ್ ಇನ್ನು ನೆನಪು ಮಾತ್ರ...!!

error: Content is protected !!