ಭಾರತ “ಎ’ ಮತ್ತು ಶ್ರೀಲಂಕಾ “ಎ’ ತಂಡಗಳ ನಡುವಿನ ಚತುರ್ದಿನ ಟೆಸ್ಟ್ ಪಂದ್ಯ ➤ಭಾರತ “ಎ’ ಇನ್ನಿಂಗ್ಸ್ ಜಯಭೇರಿ

(ನ್ಯೂಸ್ ಕಡಬ) newskadaba.com ,ಬೆಳಗಾವಿ ಮೇ.29. ಸೋಮವಾರ ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಭಾರತ “ಎ’ ಮತ್ತು ಶ್ರೀಲಂಕಾ “ಎ’ ತಂಡಗಳ ನಡುವಿನ ಚತುರ್ದಿನ ಟೆಸ್ಟ್‌ ಪಂದ್ಯ ಮೂರೇ ದಿನಕ್ಕೆ ಮುಗಿದಿದೆ. ಭಾರತ “ಎ’ ಇನ್ನಿಂಗ್ಸ್‌ ಹಾಗೂ 205 ರನ್ನುಗಳ ಭರ್ಜರಿ ಜಯ ಸಾಧಿಸಿದೆ.

ಭಾರತದ ಮಾರಕ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ “ಎ’ ತಂಡದ ಆಟಗಾರರು ಪೆವಿಲಿಯನ್‌ ಹಾದಿ ಹಿಡಿದರು. ಮೂರನೇ ದಿನದಾಟದಲ್ಲಿ ಭಾರತ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿ ವಿಜಯದ ನಗೆ ಬೀರಿತು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಅಭಿಮನ್ಯು ಈಶ್ವರನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Also Read  11 ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯ ► ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್

ಭಾರತ ಮೊದಲನೇ ಇನಿಂಗ್ಸ್‌ ನಲ್ಲಿ ಗಳಿಸಿದ್ದ ಬೃಹತ್‌ 622 ರನ್‌ (5 ವಿಕೆಟಿಗೆ ಡಿಕ್ಲೇರ್‌) ಬೆನ್ನತ್ತಿದ್ದ ಶ್ರೀಲಂಕಾ ಮೊದಲನೇ ಇನ್ನಿಂಗ್ಸ್‌ನಲ್ಲಿ 232 ರನ್ನುಗಳಿಗೆ ಆಲೌಟ್‌ ಆಯಿತು. ಫಾಲೋಆನ್‌ಗೆ ತುತ್ತಾಗಿ ಮತ್ತೆ ಬ್ಯಾಟಿಂಗಿಗೆ ಇಳಿದು 185ಕ್ಕೆ ಕುಸಿಯಿತು.ರಾಹುಲ್‌ ಚಹರ್‌ ಮತ್ತೆ 4 ವಿಕೆಟ್‌ ಕಬಳಿಸಿದರು. ಮೊದಲ ಪಂದ್ಯದಲ್ಲೂ ಅವರಿಗೆ 4 ವಿಕೆಟ್‌ ಸಿಕ್ಕಿತ್ತು. ಅಂಕಿತ್‌ ರಜಪೂತ್‌, ಸಂದೀಪ್‌ ವಾರಿಯರ್‌, ಸ್ಪಿನ್ನರ್‌ ಜಯಂತ್‌ ಯಾದವ್‌ ತಲಾ 2 ವಿಕೆಟ್‌ ಉರುಳಿಸಿದರು.

error: Content is protected !!
Scroll to Top