ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ನೇತಾರ ಡಾ| ಶಾಹ್ ಮುಸ್ಲಿಯಾರ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.29. ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ನೇತಾರ ಡಾl. ಶಾಹ್ ಮುಸ್ಲಿಯಾರ್ (87ವ.) ಮೇ 29ರಂದು ಬೆಳಿಗ್ಗೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಕೆಲ ವರ್ಷಗಳ ಕಾಲ ಮತ್ತು ಸುಮಾರು 32 ವರ್ಷಗಳ ಕಾಲ ಸುಳ್ಯ ಆರಂತೋಡು ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ಕನ್ನಡ ಪಾಂಡಿತ್ಯವನ್ನು ಹೊಂದಿದ್ದ ಇವರು ಸುಮಾರು 20 ವರ್ಷಗಳ ಕಾಲ ಸರಳಪಥ ಮತ್ತು ಅಲಮುಲ್ ಹುದಾ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ಇವರು 1966ರಲ್ಲಿ ಕೊಯಿಲ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪುತ್ರ ಅಬ್ದುಲ್ ಬಶೀರ್, ಪುತ್ರಿಯರಾದ ಸಲಾಮತ್ತ್, ಬರ್ಕತ್ತ್, ಝೀನತ್, ರಹಿಯಾನತ್, ತಾಹಿರರನ್ನು ಅಗಲಿದ್ದಾರೆ.

Also Read  ದನದ ಕಾಲನ್ನು ಕತ್ತರಿಸಿ ರಾಕ್ಷಸೀಕೃತ್ಯ ಮರೆದ ದುಷ್ಕರ್ಮಿಗಳು..! ➤ ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

error: Content is protected !!
Scroll to Top