ಪೊಲೀಸ್ ಬಿಟ್ಟು ರಾಜಕೀಯಕ್ಕೆ ಎಂಟ್ರಿಯಾಗ್ತಾರಾ ಅಣ್ಣಾಮಲೈ..? ➤ ಈ ಬಗ್ಗೆ ಸ್ಪಷ್ಟನೆ ನೀಡಿದ ‘ಕರ್ನಾಟಕದ ಸಿಂಗಂ’

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.28. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನಪರ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ತನ್ನ ವಿಶಿಷ್ಟ ಸೇವೆಯಿಂದಾಗಿ ‘ಕರ್ನಾಟಕದ ಸಿಗಂ’ ಎಂದೇ ಖ್ಯಾತರಾಗಿದ್ದ ಖಡಕ್ ಐಪಿಎಸ್ ಅಧಿಕಾರಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಮಂಗಳವಾರದಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಉನ್ನತ ಹುದ್ದೆಯಲ್ಲಿದ್ದ ಇವರು ಯಾಕಾಗಿ ರಾಜೀನಾಮೆಯನ್ನು ನೀಡಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕರಿಗೆ ಕುತೂಹಲ ಆರಂಭವಾಗಿದೆ. ಇನ್ನೊಂದೆಡೆ ತನ್ನ ವಿಶಿಷ್ಟ ಕಾರ್ಯ ವೈಖರಿಯಿಂದ ದರೋಡೆಕೋರರಿಗೆ, ಕಳ್ಳರಿಗೆ, ಕೊಲೆಗಾರರಿಗೆ ಸಿಂಹ ಸ್ವಪ್ನವಾಗಿದ್ದ ಅಣ್ಣಾಮಲೈ ಯವರ ರಾಜೀನಾಮೆಯ ವಿಚಾರದಲ್ಲಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ‌.

Also Read  ರಸ್ತೆ ದುರಸ್ತಿಗೆ ರೂ.2.69 ಕೋಟಿ ಅನುದಾನ ಬಿಡುಗಡೆ  ➤ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್  

ಇಷ್ಟೆಲ್ಲಾ ಇದ್ದರೂ ಅಣ್ಣಾಮಲೈ ಯವರು ರಾಜೀನಾಮೆಗೆ ಸ್ಪಷ್ಟಣೆ ನೀಡಿದ್ದು, ಕೆಲಸದ ಒತ್ತಡದಿಂದ ನನ್ನ ಕುಟುಂಬದ ಜೊತೆಗೆ ಇರಲು ಸಮಯಾವಕಾಶ ಸಿಗ್ತಿಲ್ಲ. ವೃತ್ತಿಗೆ ಸೇರಿದ 9 ವರ್ಷಗಳಲ್ಲಿ ಒಂದೇ ಒಂದು ಮದುವೆಗೆ ಹೋಗಿದ್ದೇನಷ್ಟೆ… ನಾನು ಇಲ್ಲಿ ಕರ್ತವ್ಯ ನಿರ್ವಹಿಸಲು ಕಾರಣರಾಗಿದ್ದ ಕೆಲವು ಪ್ರಮುಖರ ಅಂತ್ಯಕ್ರಿಯೆಗೂ ಹೋಗೋದಕ್ಕೆ ಆಗಿಲ್ಲ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯೋಕೆ ಸಹಕರಿಸಿದ ಹಲವರಿಗೆ ನನ್ನಿಂದ ಏನೂ ಮಾಡಲು ಸಾಧ್ಯವಾಗಲಿಲ್ಲವಲ್ಲ ಎಂಬ ಬಗ್ಗೆ ನನ್ನನ್ನ ಆಗ್ಗಾಗ್ಗೆ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ ಎಂದಿದ್ದಾರೆ.

error: Content is protected !!
Scroll to Top