(ನ್ಯೂಸ್ ಕಡಬ) newskadaba.com ನವದೆಹಲಿ,25.ಶುಕ್ರವಾರ ಮುಗಿದ ದ್ವಿತೀಯ “ಇಂಡಿಯನ್ ಓಪನ್ ಬಾಕ್ಸಿಂಗ್’ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕೂಟದ ಒಟ್ಟು 18 ಬಂಗಾರದ ಪದಕಗಳಲ್ಲಿ 12 ಪದಕ ಭಾರತದ ಪಾಲಾಯಿತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇಮ್ಮಡಿ ಸಾಧನೆಯಾಗಿದೆ.
2018ರಲ್ಲಿ ಭಾರತ 6 ಚಿನ್ನ ಗೆದ್ದಿತ್ತು.ಮೇರಿ ಕೋಮ್, ಎಲ್. ಸರಿತಾದೇವಿ, ಅಮಿತ್ ಪಂಘಲ್, ಶಿವ ಥಾಪ ಬಂಗಾರದ ಪದಕ ತಂದಿತ್ತ ಸಾಧಕರು. ಇದೇ ಮೊದಲ ಸಲ 60 ಕೆಜಿ ಸ್ಪರ್ಧೆಗಿಳಿದ ಅವರು ಸಿಮ್ರನ್‌ಜಿತ್ ಕೌರ್ ವಿರುದ್ಧ 3-2 ಅಂತರದ ಜಯ ಸಾಧಿಸಿದರು. ಒಲಿಂಪಿಕ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಮಾಜಿ ರಾಷ್ಟ್ರೀಯ ಚಾಂಪಿಯನ್ ಮಿಜೋರಂನ ವನಾಲ್ ದೌತಿ ವಿರುದ್ಧ ಗೆಲುವು ಒಲಿಸಿಕೊಂಡರು.
ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಸರಿತಾದೇವಿ 3 ವರ್ಷಗಳ ಬಳಿಕ ಮೊದಲ ಬಂಗಾರವನ್ನು ತಮ್ಮದಾಗಿಸಿಕೊಂಡರು.ಪುರುಷರ 52 ಕೆಜಿ ವಿಭಾಗದಲ್ಲಿ ಅಮಿತ್ ಪಂಘಲ್ ಭಾರೀ ಹೋರಾಟ ನೀಡಿದ ಜೈಂಟ್ ಕಿಲ್ಲರ್ ಸಚಿನ್ ಸಿವಾಕ್ ಅವರನ್ನು 4-1ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಶಿವ ಥಾಪ ಕಳೆದ ವರ್ಷದ ಸೆಮಿಫೈನಲ್‌ನಲ್ಲಿ ತನ್ನನ್ನು ಮಣಿಸಿದ ಮನೀಷ್ ಕೌಶಿಕ್ ಅವರನ್ನು ಕೆಡವಿದರು.