(ನ್ಯೂಸ್ ಕಡಬ) newskadaba.com ಕಡಬ, ಆ.05. ಮರ್ದಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆಯು ಇತ್ತೀಚೆಗೆ ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಸುರೇಶ್ ರೈ ನೈಲ, ಅಧ್ಯಕ್ಷರಾಗಿ ಸತೀಶ್ಚಂದ್ರ ರೈ ಮೈಕಾಜೆ, ಕಾರ್ಯದರ್ಶಿಯಾಗಿ ಪ್ರಮೋದ್ ರೈ ಕುಡಾಲ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಅನೂಪ್ ಕುಮಾರ್ ಮರ್ದಾಳ ಬೀಡು, ಶಿವಪ್ರಸಾದ್ ಕೈಕುರೆ, ನಾರಾಯಣ ಶೆಟ್ಟಿ ಅತ್ಯಡ್ಕ, ಮನೋಹರ ರೈ ಅಲಿಮಾರು, ಜನಾರ್ಧನ ಗೌಡ ಪುತ್ತಿಲ, ಸತೀಶ್ ಕೆ. ಬಸ್ತಿ ಕೊಡಿಂಕಿರಿ, ಉಪಾಧ್ಯಕ್ಷರಾಗಿ ಕುಕ್ಕಪ್ಪ ಗೌಡ ಅಂತಿಬೆಟ್ಟು, ಕುಶಾಲಪ್ಪ ಗೌಡ ಕೇನ್ಯ, ಗಣೇಶ್ ಮುಜೂರು, ವಿಠಲ ಗೌಡ ಪಾಂಗ, ಭುವನೇಂದ್ರ ಕುಮಾರ್, ವಾಸುದೇವ ಬೈಪಾಡಿತ್ತಾಯ, ಪುರುಷೋತ್ತಮ ಪಂಜೋಡಿ, ವಿನಯ ಸನ್ನಿಧಿ, ಹರೀಶ್ ಕೋಡಂದೂರು, ಉಮೇಶ್ ಬ್ರಹ್ಮಶ್ರೀ, ಜತೆ ಕಾರ್ಯದರ್ಶಿ ವಿನಯ ಕೇನ್ಯ, ಕೋಶಾಧಿಕಾರಿಯಾಗಿ ಶ್ರೀಧರ ಗೌಡ ಸುಳ್ಯ ಆಯ್ಕೆಯಾಗಿದ್ದಾರೆ.