(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.05. ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸಕ್ಕೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ತಮ್ಮ ತನಿಖೆಯನ್ನು ಶನಿವಾರ ಬೆಳಿಗ್ಗೆ ಕೊನೆಗೊಳಿಸಿದ್ದಾರೆ. ಕಳೆದ ಮೂರು ದಿನಗಳ ದಾಳಿ ಮುಕ್ತಾಯವಾದ ನಂತರ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಮನೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಕೆಲ ಹೊತ್ತು ಮಾತನಾಡಿದ ಡಿಕೆಶಿ ಬಳಿಕ ತಾವು ತಾವು ನಂಬಿರುವ ದೇವರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಅಲ್ಲಿಂದ ಹೊರಟು ಹೋದರು.
ನನಗೆ ಮಾಧ್ಯಮಗಳು, ಪಕ್ಷದ ಕಾರ್ಯಕರ್ತರು, ನಾಯಕರಲ್ಲದೇ ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಿದ್ದು, ಎಲ್ಲರಿಗೂ ಧನ್ಯವಾದಗಳು. ಕಳೆದ ಮೂರು ದಿನಗಳಿಂದ ನನ್ನ ಮನೆ, ಸ್ನೇಹಿತರ ಮನೆ ಹಾಗೂ ನನ್ನ ಸಂಬಂಧಿಕರ ಮನೆ ಮೇಲೆ ಐಟಿ ದಾಳಿಯಾಗಿದ್ದು, ತಾವೆಲ್ಲಾ ಹಗಲು ರಾತ್ರಿ ಕಾಯ್ತಾ ಇದ್ದೀರಿ. ತಮ್ಮದೇ ಆದ ವಿಚಾರಗಳನ್ನು ಮಾಧ್ಯಮದಲ್ಲಿ ಚಿತ್ರಿಸಿದ್ದು, ಮಾಧ್ಯಮವು ಒಳ್ಳೆಯದನ್ನೂ ಮಾಡಬಹುದು, ಕೆಟ್ಟದನ್ನೂ ಮಾಡಬಹುದು. ಈಗ ನಾನೇನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಅಂತ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ನನ್ನ ಮನೆಯಲ್ಲಿ ಹಾಗೂ ನನ್ನ ದೆಹಲಿ ಮನೆಯಲ್ಲಿ ಏನೆಲ್ಲ ಸಿಕ್ಕಿದೆ ಎನ್ನುವುದನ್ನು ಪಂಚನಾಮ ಮಾಡಿದ ನಂತರ ದಾಖಲೆ ಮೂಲಕ ಹೇಳುತ್ತೇನೆ. ಈಗ ನಾನು ಏನನ್ನೂ ಹೇಳಲಾರೆ. ಕಾನೂನು ಚೌಕಟ್ಟು ಬಿಟ್ಟು ಹಾಗೂ ಸಂವಿಧಾನವನ್ನು ಬಿಟ್ಟು ನಡೆಯುವಂತಹ ವ್ಯಕ್ತಿ ನಾನಲ್ಲ. ಹೀಗಾಗಿ ದಾಖಲೆ ಸಮೇತ ನಿಮ್ಮನ್ನೆಲ್ಲಾ ಕರೆದು ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ. ಸದ್ಯಕ್ಕೆ ನಾನು ನಂಬಿರುವಂತಹ ದೇವರ ಬಳಿ ಹೋಗಬೇಕಾಗಿದೆ ಎಂದು ಹೇಳಿ ಹೊರಟು ಹೋದರು.