ಕೊರಿಯಾವನ್ನು ಕೆಡವಿದ ಭಾರತ,ವನಿತಾ ಹಾಕಿ ಸರಣಿ

(ನ್ಯೂಸ್ ಕಡಬ) newskadaba.com ದಕ್ಷಿಣ ಕೊರಿಯಾ,ಮೇ.21. ಸೋಮವಾರದ ಮೊದಲ ಪಂದ್ಯದಲ್ಲಿ 2-1 ಗೋಲುಗಳ ಜಯ ದಾಖಲಿಸಿದೆ.ಯುವ ಸ್ಟ್ರೈಕರ್‌ ಲಾಲ್ರೆಮ್ಸಿಯಾಮಿ (20ನೇ ನಿಮಿಷ) ಮತ್ತು ನವನೀತ್‌ ಕೌರ್‌ (40ನೇ ನಿಮಿಷ) ಗೋಲು ಬಾರಿಸಿದರು.

ಭಾರತದ ಆಕ್ರಮಣದ ಬಳಿಕ, ಪಂದ್ಯದ 48ನೇ ನಿಮಿಷದಲ್ಲಿ ಹೀಜಿಯಾಂಗ್‌ ಅವರಿಂದ ದಕ್ಷಿಣ ಕೊರಿಯಾದ ಏಕೈಕ ಗೋಲು ದಾಖಲಾಯಿತು.ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧದ 3 ಪಂದ್ಯಗಳ ವನಿತಾ ಹಾಕಿ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಆತಿಥೇಯರ ಮೇಲುಗೈಗೆ ಗೋಲ್ಕೀಪರ್‌ ಸವಿತಾ ತಡೆಯಾಗಿ ನಿಂತರು.ಸರಣಿಯ ದ್ವಿತೀಯ ಪಂದ್ಯ ಬುಧವಾರ ನಡೆಯಲಿದೆ.

Also Read  ಟೆಸ್ಟ್ ಕ್ರಿಕೆಟ್ ವಿಶ್ವ ಸಮರ ಹಣಾಹಣಿ ➤ ನಾಳೆಯಿಂದ ಟೆಸ್ಟ್ ಕ್ರಿಕೆಟ್ ವಿಶ್ವಕಪ್

 

error: Content is protected !!
Scroll to Top