(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಮೇ.20. ಅದೊಂದು ಪುಟ್ಟ ಸಂಸಾರ. ಇಬ್ಬರು ಅವಳಿಗಳು ಸೇರಿದಂತೆ ಒಟ್ಟು ಮೂವರು ಗಂಡು ಮಕ್ಕಳು. ತಂದೆ ಕೂಲಿ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿರುತ್ತಾರೆ.
ಅದೊಂದು ದಿನ ಬೆಟ್ಟವೇ ಕುಸಿದು ಮೈಮೇಲೆ ಬಿದ್ದಂತಹ ನೋವು ಈ ಕುಟುಂಬಕ್ಕೆ ಬಂದೆರಗುತ್ತದೆ. ಅದೇನೆಂದರೆ ಇಬ್ಬರು ಅವಳಿ ಮಕ್ಕಳು ದೈಹಿಕ ಕ್ಷಮತೆಯಿಲ್ಲದೆ ಒದ್ದಾಡುತ್ತಿದ್ದರೆ, ಇಬ್ಬರಿಗೂ ಹಿಮೋಫೀಲಿಯಾ ಇದೆ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡುತ್ತಾರೆ. ಹತ್ತಿರದವರಲ್ಲೆಲ್ಲಾ ಕಾಡಿ – ಬೇಡಿ ಚಿಕಿತ್ಸೆ ನೀಡಿದ ಹೆತ್ತವರಿಗೆ ಕೊನೆಗೆ ದಾರಿ ಕಾಣದಾಗಿದ್ದು, ಇದೀಗ ದಾನಿಗಳ ಮೊರೆ ಹೋಗಿದ್ದಾರೆ. ಹಾಸಿಗೆಯಲ್ಲಿ ಮಲಗಿರುವ ಈ ಯಾತನಾಮಯ ದೃಶ್ಯ ಕಾಣಸಿಗುವುದು ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಪ್ರಸಾದ್ ನಗರದಲ್ಲಿ.
ಇವರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಬ್ಬೊಬ್ಬರಿಗೆ ಒಂದು ಸಲಕ್ಕೆ ಎರಡು ಲಕ್ಷ ರೂ. ಖರ್ಚಾಗುತ್ತಿದೆ. ತೀರಾ ಬಡತನದಲ್ಲಿ ದೈನಂದಿನ ಜೀವನವನ್ನು ನಡೆಸುತ್ತಿರುವ ಈ ಬಾಲಕರ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೋಡಲು ನಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ಈ ಕುಟುಂಬವು ಕಾಯುತ್ತಾ ಇದೆ. ತಾವೆಲ್ಲರೂ ಈ ಬಾಲಕರ ನೆರವಿಗೆ ಆದಷ್ಟು ಬೇಗ ಸ್ಪಂದಿಸುತ್ತೀರಿ ಎಂಬ ಭರವಸೆಯಲ್ಲಿ ಈ ಪುಟ್ಟ ಬಾಲಕರ ಹೆತ್ತವರು ನಿಮ್ಮ ಜೊತೆ ಈ ಮೂಲಕ ಕೈ ಮುಗಿದು ವಿನಮ್ರವಾಗಿ ವಿನಂತಿಸುತ್ತಾ ಇದ್ದಾರೆ
ವಿವರಗಳಿಗಾಗಿ 9008147009 ಸಂಖ್ಯೆಯನ್ನು ಸಂಪರ್ಕಿಸಿ. ಬ್ಯಾಂಕ್ ಖಾತೆಯ ವಿವರ.
Name: Rajeena
Bank : vijaya bank
Ac.Type: SB
A/c.No.:111601011003466
Branch : Kapu
IFSC Code : VIJB0001116