‘ನಮ್ಮ ಸುಬ್ರಹ್ಮಣ್ಯ’ ತಂಡದಿಂದ ಶ್ರಮದಾನ ➤ ಯಾತ್ರಾರ್ಥಿಗಳು ರಸ್ತೆ ಬದಿಯಲ್ಲಿ ಬಿಸಾಡಿದ್ದ ತ್ಯಾಜ್ಯ ಸಂಗ್ರಹ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.20. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯದ ರಸ್ತೆ ಬದಿಯಲ್ಲಿ ಯಾತ್ರಾರ್ಥಿಗಳು ಬಿಸಾಡಿದ್ದ ತ್ಯಾಜ್ಯವನ್ನು ‘ನಮ್ಮ ಸುಬ್ರಹ್ಮಣ್ಯ’ ತಂಡದ ಯುವಕರು ಶ್ರಮದಾನದ ಮೂಲಕ ಸ್ವಚ್ಛ ಮಾಡಿದರು.

ಶನಿವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ತಂಡದ 15 ಕ್ಕೂ ಹೆಚ್ಚು ಕಾರ್ಯಕರ್ತರು ಕುಕ್ಕೇ ಸುಬ್ರಹ್ಮಣ್ಯದ ದೇವರಗದ್ದೆ ರಸ್ತೆಯ ಎರಡೂ ಬದಿಗಳಲ್ಲಿ 2 ಕಿಮೀ ವ್ಯಾಪ್ತಿಯಲ್ಲಿ ಸ್ವಚ್ಛ ಮಾಡಿ ಸುಮಾರು 3 ಪಿಕಪ್ ನಷ್ಟು ಪ್ಲಾಸ್ಟಿಕ್, ಬಿಯರ್ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಸ್ವಚ್ಚತಾ ಕಾರ್ಯದಲ್ಲಿ ‘ನಮ್ಮ ಸುಬ್ರಹ್ಮಣ್ಯ’ ತಂಡದ ರಮೇಶ್, ಸ್ಮರಣ್, ಅಶ್ವಥ್, ಸೂರ್ಯ, ಸುದರ್ಶನ್, ಪುರುಷೋತ್ತಮ್, ಅಖಿಲ್, ರಾಮಚಂದ್ರ, ಶೋಭಿತ್, ರತನ್, ಜಯೇಶ್, ಅವನೀಶ್, ಸಂದೀಪ್, ಪ್ರಣವ್ ಮೊದಲಾದವರು ಭಾಗವಹಿಸಿದ್ದರು.

Also Read  ಮಂಗಳೂರು: ಕರಾವಳಿಯಲ್ಲಿ ಹೆಚ್ಚಿದ ಚಳಿ…!!!  ➤ ಸಾಂಕ್ರಾಮಿಕ ರೋಗದ ಭೀತಿ

error: Content is protected !!
Scroll to Top