ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಫಿಲಿಪ್ ರವರ ಪಾರ್ಥಿವ ಶರೀರ ಇಂದು ಕಡಬಕ್ಕೆ ➤ 9 ಗಂಟೆಗೆ ಕಡಬ ಪೇಟೆಯಿಂದ ಮೆರವಣಿಗೆಯಲ್ಲಿ ಸ್ವಗೃಹಕ್ಕೆ ➤ ಮೃತರ ಗೌರವಾರ್ಥ ಕೆಲಕಾಲ ಅಂಗಡಿಗಳನ್ನು ಮುಚ್ಚುವಂತೆ ಕೃಷ್ಣ ಶೆಟ್ಟಿ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಮೇ.20. ಎರಡು ದಿನಗಳ ಹಿಂದೆ ಮೃತಪಟ್ಟ ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಫಿಲಿಪ್ ರವರ ಪಾರ್ಥಿವ ಶರೀರವು ಸೋಮವಾರ ಬೆಳಿಗ್ಗೆ 9.00 ಗಂಟೆಗೆ ಕಡಬಕ್ಕೆ ಆಗಮಿಸಲಿದ್ದು, ಕಡಬ ಅನುಗ್ರಹ ಸಭಾಭವನದ ಬಳಿಯಿಂದ ಮೆರವಣಿಗೆಯಲ್ಲಿ ಸಾಗಲಿದೆ.

10.00 ಗಂಟೆಗೆ ಮೃತರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಪರಾಹ್ನ ಕಡಬ ಆರೋಗ್ಯ ಮಾತಾ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪಾರ್ಥಿವ ಶರೀರ ಕಡಬಕ್ಕೆ ಆಗಮಿಸುವ ಸಂದರ್ಭದಲ್ಲಿ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಕಡಬ ಪೇಟೆಯ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶವಯಾತ್ರೆಯಲ್ಲಿ ಭಾಗವಹಿಸಿ ಮೃತರಿಗೆ ಅಂತಿಮ ಗೌರವ ಸಲ್ಲಿಸುವುದೆಂದು ಪ್ರಮುಖರು ತೀರ್ಮಾನಿಸಿರುವುದರಿಂದ ವರ್ತಕ ಬಂಧುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಸಹಕರಿಸುವಂತೆ ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಕೃಷ್ಣ ಶೆಟ್ಟಿಯವರು ಮನವಿ ಮಾಡಿದ್ದಾರೆ.

Also Read  ಈ 4 ರಾಶಿಯವರಿಗೆ ವಿವಾಹ ಯೋಗ, ಜೀವನದ ಕಷ್ಟ ಪರಿಹಾರ ಡಿಸೆಂಬರ್ ತಿಂಗಳಿನಿಂದ ಈ ರಾಶಿಯವರ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ

error: Content is protected !!
Scroll to Top