ನಾಳೆ ನೆಕ್ಕಿತ್ತಡ್ಕ ದರ್ಗಾದಲ್ಲಿ ಮಾಸಿಕ ಕೂಟು ಝಿಯಾರತ್

ಕಡಬ, (newskadaba.com) ಕಡಬ, ಆ.05. ತಕ್ವಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ ಮರ್ಧಾಳ ಇದರ ಅಧೀನದಲ್ಲಿರುವ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಕ್ಕಿತ್ತಡ್ಕ ಎಂಬಲ್ಲಿ ಜಾತಿ, ಧರ್ಮ ಭೇದವೆನ್ನದೆ ಹಲವಾರು ಸಮಸ್ಯೆಗಳಿಗೆ ಹರಕೆಯ ಮೂಲಕ ಪರಿಹಾರ ಕಂಡುಕೊಂಡಿರುವ ಮಾಸಿಕವಾಗಿ ನಡೆಸಿಕೊಂಡು ಬರುತ್ತಿರುವ ನೆಕ್ಕಿತ್ತಡ್ಕ ಕೂಟು ಝಿಯಾರತ್ ಆಗಸ್ಟ್ 06 ನೇ ಭಾನುವಾರ ರಾತ್ರಿ 7 ಗಂಟೆಯಿಂದ ನಡೆಯಲಿದೆ.

ಮರ್ಧಾಳ ಜಮಾಅತಿನ ಖತೀಬರಾದ ಮಹಮ್ಮದ್ ಹನೀಫ್ ಸಖಾಫಿ ಎಮ್ಮೆಮ್ಮಾಡು ನೇತೃತ್ವ ವಹಿಸಲಿದ್ದಾರೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group