ಧೋನಿಗೆ ಆಕ್ರಮಣಕಾರಿಯಾಗಿ ಆಡಲು ಪೂರ್ತಿ ಸ್ವಾತಂತ್ರ್ಯ ನೀಡುವುದು ಉತ್ತಮ: ಹರ್ಭಜನ್ ಸಿಂಗ್

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.18. “ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಇಳಿದಾಗಲೆಲ್ಲ ಧೋನಿ ಉತ್ತಮ ಪ್ರದರ್ಶನ ನೀಡುವುದನ್ನು ನಾವು ಕಂಡಿದ್ದೇವೆ. ಇದೇ ರೀತಿಯ ಬ್ಯಾಟಿಂಗ್‌ ನಡೆಸಲು ಅವರಿಗೆ ತಂಡದ ಆಡಳಿತ ಮಂಡಳಿ ಅನುಮತಿ ನೀಡಬೇಕು.  ಮಹೇಂದ್ರ ಸಿಂಗ್‌ ಧೋನಿ ಅವರಲ್ಲಿ ಈಗಲೂ ಸಿಕ್ಸ್‌-ಹಿಟ್ಟಿಂಗ್‌ ಪವರ್‌ ಇದೆ. ಹೀಗಾಗಿ ವಿಶ್ವಕಪ್‌ ವೇಳೆ ಆಕ್ರಮಣಕಾರಿ ಆಟವಾಡಲು ಅವರಿಗೆ ಆಡಳಿತ ಮಂಡಳಿ ಸ್ವಾತಂತ್ರ್ಯ ನೀಡಬೇಕು ಎಂದು ಹರ್ಭಜನ್‌ ಸಿಂಗ್‌ ಹೇಳಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅವರ ಬಿರುಸಿನ ಆಟಕ್ಕೂ ನಿರ್ಬಂಧ ವಿಧಿಸಬಾರದು’ ಎಂದು ಹರ್ಭಜನ್‌ ಸಲಹೆ ಮಾಡಿದರು.ಅಗ್ರ ಕ್ರಮಾಂಕದಲ್ಲಿ ಧವನ್‌, ರೋಹಿತ್‌, ಕೊಹ್ಲಿ ಮತ್ತು ರಾಹುಲ್‌ ಇನ್ನಿಂಗ್ಸ್‌ ಕಟ್ಟಬಲ್ಲರು. ಹೀಗಾಗಿ ಧೋನಿಗೆ ಆಕ್ರಮಣಕಾರಿಯಾಗಿ ಆಡಲು ಪೂರ್ತಿ ಸ್ವಾತಂತ್ರ್ಯ ನೀಡುವುದು ಉತ್ತಮ ಎಂದು ಹರ್ಭಜನ್‌ ಹೇಳಿದರು.

Also Read  ಮದುವೆ ಮನೆಯಲ್ಲಿ ಆಸಿಡ್ ದಾಳಿ ಕೇಸ್ ಗೆ ಟ್ವಿಸ್ಟ್    ➤ ಯುವತಿಯೋರ್ವಳಿಂದ ನಡೆಯಿತಾ ಕೃತ್ಯ

 

error: Content is protected !!
Scroll to Top