ಕರಬೂಜ ಬೀಜಗಳಲ್ಲಿದೆ ಆರೋಗ್ಯ ವೃದ್ಧಿಸುವ ಅಂಶ

(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ : ಕರಬೂಜ ಬೇಸಿಗೆಯ ಸಮಯದಲ್ಲಿ ಹೆಚ್ಚು ಫಲದಾಯಕವಾಗುವಂತಹ ಹಣ್ಣುಗಳಲ್ಲೊಂದು. ಹಣ್ಣುಗಳು ಮಾತ್ರವಲ್ಲ, ಇದರ ಬೀಜವೂ ಅಧಿಕ ಉಪಕಾರಿಯಾದಂತಹ ಪದಾರ್ಥ. ಆರೋಗ್ಯಸಹಕಾರಿ ಗುಣಗಳು ಹಾಗೂ ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ.ಕರಬೂಜದ ಬೀಜಗಳು ಪ್ರೋಟೀನ್ ಭರಿತವಾದಂಥವುಗಳು. ಕಣ್ಣಿನ ಆರೋಗ್ಯಕ್ಕೆ ಇವುಗಳ ಸೇವನೆಯು ಬಹಳ ಒಳ್ಳೆಯದು.

ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡಲು ಕರಬೂಜದ ಬೀಜಗಳ ಸೇವನೆಯು ಸಹಕಾರಿ. ವಯಸ್ಸಾದಂತೆ ಮೂಳೆಗಳ ಸಾಂದ್ರತೆಯು ಕಡಿಮೆ ಆಗುತ್ತ ಹೋಗುತ್ತದೆ. ಆ ಮಧುಮೇಹವು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿ ಕಾಡುತ್ತಿರುವಂತಹ ಜೀವನಶೈಲಿ ಕಾಯಿಲೆ. ಇನ್ಸುಲಿನ್ ಸ್ರವಿಕೆ ಸರಿಯಾಗಿ ಆಗುವಂತೆ ಮಾಡಲು ಹಾಗೂ ಮಧುಮೇಹ ಬರುವಂತಹ ಸಂಭವವನ್ನು ಕಡಿಮೆ ಮಾಡಲು ಕರಬೂಜ ಬೀಜಗಳ ಸೇವನೆ ಸಹಕಾರಿ. ಹೃದಯದ ಆರೋಗ್ಯಕ್ಕೆ ಇವುಗಳು ಉತ್ತಮ. ಸ್ವಲ್ಪ ಪ್ರಮಾಣದಲ್ಲಿ ಒಮೆಗಾ-3 ಮೇದಾಮ್ಲವನ್ನು ಹೊಂದಿರುವ ಇವು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ.

Also Read  ಮಹಾಲಕ್ಷ್ಮೀ ಕೊಲೆ ಪ್ರಕರಣ - ಆರೋಪಿಯ ಡೆತ್ ನೋಟ್ ನಲ್ಲಿ ಕೊಲೆರಹಸ್ಯ ಬಯಲು

ಸೋಂಕುಗಳು ಹಾಗೂ ಸಾಮಾನ್ಯ ಶೀತ, ನೆಗಡಿ ತೊಂದರೆಗಳ ನಿರ್ವಹಣೆಗೆ ಕರಬೂಜ ಬೀಜಗಳ ಸೇವನೆ ಉಪಯುಕ್ತ. ಹೊಟ್ಟೆಯಲ್ಲಿನ ಜಂತುಹುಳುಗಳ ಸಮಸ್ಯೆಯನ್ನು ಕಡಿಮೆ ಮಾಡಲು, ದೇಹದ ತೂಕ ಇಳಿಕೆಗೆ ಅನುಕೂಲಕಾರಿ. ಹಣ್ಣುಗಳಿಂದ ಕರಬೂಜದ ಬೀಜಗಳನ್ನು ಬೇರ್ಪಡಿಸಿ ತೊಳೆದು ನೆರಳಿನಲ್ಲಿ ಒಣಗಿಸಿಕೊಂಡು ಇರಿಸಿಕೊಳ್ಳಬೇಕು. ಇದನ್ನು ನಿರಂತರವಾಗಿ ಸೇವಿಸುತ್ತ ಬರುವುದರಿಂದ ಒಳ್ಳೆಯ ಪರಿಣಾಮಗಳು ಕಂಡುಬರುತ್ತವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಯನ್ನು ಹೊಂದಿರುತ್ತವೆ.

error: Content is protected !!
Scroll to Top