ವಿಶ್ವಕಪ್ ಗೆ ಫಿಟ್: ಶಾದಾಬ್ ಖಾನ್

(ನ್ಯೂಸ್ ಕಡಬ) newskadaba.com,ಕರಾಚಿ,ಮೇ.17.ವೈರಲ್ ಸೋಂಕಿನಿಂದ ನರಳುತ್ತಿದ್ದ ಶಾದಾಬ್‌ ಖಾನ್‌ ಈಗ ಪೂರ್ತಿ ಚೇತರಿಸಿಕೊಂಡಿದ್ದಾರೆ. ಪಾಕಿಸ್ಥಾನದ ಯುವ ಲೆಗ್‌ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಶಾದಾಬ್‌ ಖಾನ್‌ ಆರೋಗ್ಯ ಸಂಪೂರ್ಣ ಚೇತರಿಸಿದ್ದು, ವಿಶ್ವಕಪ್‌ನಲ್ಲಿ ಆಡಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.ತವರಿಗೆ ಮರಳಿದ ಶಾದಾಬ್‌ ಗುರುವಾರ ಇಂಗ್ಲೆಂಡಿಗೆ ತೆರಳಲಿದ್ದಾರೆ.ಹೆಪಟೈಟಿಸ್‌ ಸಿ ಲಕ್ಷಣವಿದ್ದುದರಿಂದ ಅವರು ಮ್ಯಾಂಚೆಸ್ಟರ್‌ ವೈದ್ಯ ಡಾ| ಪ್ಯಾಟ್ರಿಕ್‌ ಕೆನಡಿ ಬಳಿ ಚಿಕಿತ್ಸೆ ಪಡೆದಿದ್ದರು.

ವಿಶ್ವಕಪ್‌ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಪಾಕಿಸ್ಥಾನದ ಯಶಸ್ಸಿನಲ್ಲಿ ನನ್ನ ಪಾತ್ರವೂ ಇರಬೇಕೆಂಬ ಬಯಕೆ ಹೊಂದಿದ್ದೇನೆ’ ಎಂದು ಶಾದಾಬ್‌ ಖಾನ್‌ ಹೇಳಿದ್ದಾರೆ. ಶಾದಾಬ್‌ ಅವರನ್ನು ವಿಶ್ವಕಪ್‌ ಅಭ್ಯಾಸ ಪಂದ್ಯಗಳಲ್ಲಿ ಆಡಿಸಬೇಕೋ ಬೇಡವೋ ಎಂಬುದು ತಂಡದ ಆಡಳಿತ ಮಂಡಳಿಗೆ ಬಿಟ್ಟ ವಿಚಾರ ಎಂದು ಪಿಸಿಬಿ ಹೇಳಿದೆ.

Also Read  ಕಾರ್ಮಿಕ ದಿನಾಚರಣೆ ಆಚರಣೆ

 

error: Content is protected !!
Scroll to Top