ಆಗಸ್ಟ್‌ 13 ರಂದು ಕಡಬದಲ್ಲಿ ಅಖಂಡ ಭಾರತ ಸಂಕಲ್ಪ ದಿನ ► ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ

(ನ್ಯೂಸ್ ಕಡಬ) newskadaba.com ಕಡಬ, ಆ.04. ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಆಗಸ್ಟ್‌ 13 ರಂದು ಸಂಜೆ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ ಹೇಳಿದರು.

ಅವರು ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 71 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 1947 ರ ಆಗಸ್ಟ್‌ 14 ಮಧ್ಯರಾತ್ರಿ ದೇಶವಿಭನೆಯ ಕರಾಳ ದುರಂತವನ್ನು ನೆನಪಿಸಿಕೊಳ್ಳುತ್ತಾ ಈಬಾರಿ ಕಡಬದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಸ್ವಾಂತ್ರ್ಯ ಹೋರಾಟದಲ್ಲಿ ಮಡಿದ ಹುತಾತ್ಮರಾದ ಮಹಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಹಾಗೂ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದರ ಜೊತೆಗೆ ದೇಶದ ಬಗ್ಗೆ ನಮ್ಮ ಕರ್ತವ್ಯ ಜವಾಬ್ದಾರಿಯನ್ನು ನೆನಪಿಸುವ ಉದ್ದೇಶದಿಂದ ಕಡಬ ತಾಲೂಕಿನಲ್ಲಿ ಭಾರತ್ ಮಾತಾ ಪುಜನಾ ಕಾರ್ಯಕ್ರಮ ಹಾಗೂ ದೊಂದಿ ಮೆರವಣಿಗೆ, ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಪೈಕಿ ನೆಲ್ಯಾಡಿಯಲ್ಲಿ ಹಾಗೂ ಕಡಬದಲ್ಲಿ ದೊಂದಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಭಾರತ್ ಮಾತಾ ಪುಜನಾ ಕಾರ್ಯಕ್ರಮ ಕಡಬ ವ್ಯಾಪ್ತಿಯ ಹಳೆ ನೇರೆಂಕಿಯಲ್ಲಿ ಆಗಸ್ಟ್‌ 9 ರಂದು, ಆಗಸ್ಟ್‌ 11 ರಂದು ಕುಂತೂರಿನಲ್ಲಿ, ಆಗಸ್ಟ್‌ 12 ರಂದು ಮರ್ಧಾಳದಲ್ಲಿ, ಆಗಸ್ಟ್‌ 13 ರಂದು ಕಡಬದಲ್ಲಿ ಸಂಜೆ ನಡೆಯುವ ಅಖಂಡ ಭಾರತ ಸಂಕಲ್ಪ ದಿನವನ್ನು ಬೃಹತ್ ಮೆರವಣಿಗೆಯೊಂದಿಗೆ ನಡೆಸಲಾಗುವುದು, ಕಡಬದ ಎ.ಪಿ.ಎಂ.ಸಿ ಮಾರುಕಟ್ಟೆ ಬಳಿಯಿಂದ ಹೊರಡುವ ಮೆರವಣಿಗೆಯನ್ನು ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೇಕರ ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದೂ ಜಾಗರಣ ವೇದಿಕೆಯ ವಿಟ್ಲ ತಾಲೂಕು ಸಂಚಾಲಕ ಗಣರಾಜ್ ಭಟ್ ಕೆದಿಲ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಪ್ರಶಾಂತ್ ಪಂಜೋಡಿ ವಿವರ ನೀಡಿದರು.

Also Read  ಕಸ ಹಾಕೋ ಕಿರಾತಕರಿಗೆ ಸ್ಪೆಷಲ್ ಬ್ಯಾನರ್ ರೆಡಿ ➤ ಬ್ಯಾನರ್ ನಲ್ಲಿ ಏನಿದೆ ಗೊತ್ತೇ.?!

ಇದೇ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಸಹ ಸಂಚಾಲಕ ರವಿರಾಜ್ ಶೆಟ್ಟಿ ಕಡಬ ಮಾತನಾಡಿ ದೇಶಕ್ಕೆ ಅಪಾಯ ಬಂದಾಗ ಸಂಘಟನೆ ದೇಶ ಭಕ್ತರ ತಂಡದೊಂದಿದೆ ಎದುರಿಸಲು ಸದಾ ಸಿದ್ದವಿದೆ, ಮಾತ್ರವಲ್ಲ ಹಿಂದೂ ಸಂಸ್ಕೃತಿ ಹಾಗೂ ಧರ್ಮ ರಕ್ಷಣೆಯ ವಿಚಾರದಲ್ಲಿ ನಮ್ಮ ಕಾರ್ಯಕರ್ತರು ಕಟಿಬದ್ದರಾಗಿರುತ್ತಾರೆ. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಡಬ ವಲಯದಲ್ಲಿ ಅಲ್ಲಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕಡಬ ತಾಲೂಕು ಸಹ ಸಂಚಾಲಕರಾಗಿ ಮಲ್ಲೇಶ್ ಆಲಂಕಾರು, ಆಲಂಕಾರು ಘಟಕದ ಅಧ್ಯಕ್ಷರಾಗಿ ಜನಾರ್ಧನ ಗೌಡ ಕಯ್ಯಪೆ, ಸಂಚಾಲಕರಾಗಿ ಧನಂಜಯ ಕಜೆ ಅವರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಎಂದರು
ಪತ್ರಿಕಾ ಗೋಷ್ಠಿಯಲ್ಲಿಯಲ್ಲಿ ಜಿಲ್ಲಾ ಸಹ ಸಂಚಾಲಕ ಮೋಹನ್ ಕೊೖಲ, ಕಡಬ ತಾಲೂಕು ಸಂಚಾಲಕ ವೆಂಕಟ್ರಮಣ ಕೋಡಿಂಬಾಳ, ಸಹ ಸಂಚಾಲಕ ಪ್ರಮೋದ್ ರೈ ಕುಡಾಲ ಮೊದಲಾದವರು ಉಪಸ್ಥಿತರಿದ್ದರು.

Also Read  ಮೆಲ್ಕಾರ್: ಯುವಕನಿಗೆ ತಲವಾರು ದಾಳಿ

 

error: Content is protected !!
Scroll to Top