ಕಡಬ: ಬಲಾತ್ಕಾರವಾಗಿ ಅತ್ಯಾಚಾರಗೈದುದರಿಂದ ಗರ್ಭಿಣಿಯಾದ 13ರ ಹರೆಯದ ಬಾಲಕಿ ➤ ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.16. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಬಲಾತ್ಕಾರದಿಂದ ಅತ್ಯಾಚಾರಗೈದುದರಿಂದ ಬಾಲಕಿ ಇದೀಗ ಗರ್ಭಿಣಿಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಿಂದ ತಡವಾಗಿ ಬೆಳಕಿಗೆ ಬಂದಿದೆ.

ಕಡಬ ತಾಲೂಕು ರಾಮಕುಂಜ ಗ್ರಾಮದ ಮಾರಂಗ ನಿವಾಸಿ ಬಾಬು ಎಂಬವರ ಪುತ್ರ ರಮೇಶ(20) ಎಂಬಾತ ಕಡಬ ಠಾಣಾ ವ್ಯಾಪ್ತಿಯ13 ರ ಹರೆಯದ ಬಾಲಕಿಯ ಮೇಲೆ ಸುಮಾರು ಎರಡು ತಿಂಗಳ ಹಿಂದೆ ಅತ್ಯಾಚಾರ ಎಸಗಿ, ಈ ವಿಚಾರವನ್ನು ಹೊರಗಡೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಬಾಲಕಿಯು ಇದೀಗ ಎರಡು ತಿಂಗಳ ಗರ್ಭಿಣಿಯಾಗಿದ್ದು, ಮನೆಯವರಿಗೆ ಅತ್ಯಾಚಾರಗೈದ ವಿಚಾರ ತಿಳಿದುಬಂದಿದೆ. ಈ ಬಗ್ಗೆ ಆರೋಪಿ ರಮೇಶನ ವಿರುದ್ಧ ಬಾಲಕಿ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಮಂಗಳೂರು :ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ನಿಧನ

error: Content is protected !!
Scroll to Top