ಮಾಣಿ: ಕಾರು – ದ್ವಿಚಕ್ರ ವಾಹನ ಢಿಕ್ಕಿ ➤ ರೊಚ್ಚಿಗೆದ್ದ ಜನರಿಂದ ಕಾರು ಜಖಂ ➤ ಎರಡು ಗುಂಪುಗಳ‌ ನಡುವೆ ಮಾರಾಮಾರಿ

(ನ್ಯೂಸ್ ಕಡಬ) newskadaba.com ಮಾಣಿ, ಮೇ.13. ದ್ವಿಚಕ್ರ ವಾಹನ ಹಾಗೂ ಕಾರು ಮಧ್ಯೆ ಢಿಕ್ಕಿ ಸಂಭವಿಸಿದ್ದು, ಆ ಬಳಿಕ ಎರಡು ಗುಂಪುಗಳ‌ ನಡುವೆ ಹೊಡೆದಾಟ ನಡೆದ ಘಟನೆ ಸೋಮವಾರ ರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಲ್ಲಿ ನಡೆದಿದೆ.

ಮಂಗಳೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಹಾಗೂ ವಿರುದ್ಧ ದಿಕ್ಕಿನಿಂದ ಸಾಗುತ್ತಿದ್ದ ಕಾರು ನಡುವೆ ಮಾಣಿ ವೈನ್ ಶಾಪ್ ಬಳಿ ಢಿಕ್ಕಿ ಸಂಭವಿಸಿದ್ದು, ಆಕ್ರೋಶಗೊಂಡ ದ್ವಿಚಕ್ರ ವಾಹನ ಸವಾರರ ಜೊತೆಗಿದ್ದವರು ಕಾರನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಗಂಭೀರ ಸ್ವರೂಪದ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

Also Read  ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಹಲವು ಪ್ರಶಸ್ತಿ

error: Content is protected !!
Scroll to Top