ಸಂಪಾಜೆ: ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.13. ನಿಂತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪಾಜೆಯಲ್ಲಿ ಸೋಮವಾರದಂದು ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಪುತ್ತೂರಿನ ಬೆದ್ರಾಳ ನಿವಾಸಿ ಜಯರಾಮ ಎಂದು ಗುರುತಿಸಲಾಗಿದೆ. ಜಯರಾಮರು ತನ್ನ ಸಹೋದರನೊಂದಿಗೆ ಮಡಿಕೇರಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದಾಗ ಸಂಪಾಜೆ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದಿದ್ದು, ಗಾಯಗೊಂಡ ಜಯರಾಮರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಮೃತರ ಸಹೋದರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಈ ರೀತಿಯಲ್ಲಿ ದೀಪ ಬೆಳಗಿಸಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತವೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

error: Content is protected !!