(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಬಿಸಿಲಿನ ಝಳಕ್ಕೆ ದೇಹವು ದಾಹದಿಂದ ತಣ್ಣಗಿನ ಪಾನೀಯವನ್ನು ಅರಸುತ್ತಿದೆ. ಇಂತಹ ಸಂದರ್ಭದಲ್ಲಿ ದಣಿವಾರಿಸಲು ಸಹಾಯಕವಾಗುವ ಸಿಹಿ, ಹುಳಿ, ಖಾರ ಮಿಶ್ರಿತ ರುಚಿ ಹೊಂದಿರುವ ಶರೀರವನ್ನು ತಂಪಾಗಿಸುವ ಆರೋಗ್ಯಕರ ಪಾನೀಯಗಳು ನಿಮಗಾಗಿ…
ಮಜ್ಜಿಗೆಜ್ಯೂಸ್
ಬೇಕಾಗುವ ಸಾಮಗ್ರಿ: ದಪ್ಪಮಜ್ಜಿಗೆ- ಒಂದು ಕಪ್, ನೀರು- ಮೂರು ಕಪ್, ಹಸಿಮೆಣಸಿನ ಕಾಯಿ- ಮೂರು, ಲಿಂಬೆರಸ- ಮೂರು ಚಮಚ, ಶುಂಠಿ-ಸಣ್ಣ ತುಂಡು, ಕೊತ್ತಂಬರಿ ಸೊಪ್ಪು-ಮೂರು ಗರಿ, ಒಗ್ಗರಣೆಗೆ- ಸಾಸಿವೆ, ತುಪ್ಪ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ದಪ್ಪಮಜ್ಜಿಗೆಗೆ ನೀರು ಸೇರಿಸಿಕೊಳ್ಳಿ. ಬಾಣಲೆಗೆ ತುಪ್ಪಹಾಕಿ ಕಾದೊಡನೆ ಸಾಸಿವೆ ಹಾಕಿ, ಸಿಡಿದ ನಂತರ ಸಣ್ಣಗೆ ಹೆಚ್ಚಿಟ್ಟ ಹಸಿಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪುಹಾಕಿ ಚೆನ್ನಾಗಿ ಮಿಶ್ರ ಮಾಡಿ ಮಜ್ಜಿಗೆಗೆ ಸೇರಿಸಿ, ಉಪ್ಪು ಹಾಕಿ ಕದಡಿಕೊಂಡು ಲಿಂಬೆರಸ ಸೇರಿಸಿ ಸವಿಯಿರಿ. (ಬೇಕಿದ್ದರೆ ಐಸ್‌ಕ್ಯೂಬ್ ಸೇರಿಸಿಕೊಳ್ಳಿ.)ತಂಪಾದ ಮಜ್ಜಿಗೆ ಜ್ಯೂಸ್ ರೆಡಿ.