(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ :ಈರುಳ್ಳಿಯ ಉಪಯೋಗಗಳು
ತಲೆಹೊಟ್ಟು, ಕೂದಲು ಉದುರುವಿಕೆ, ಕೂದಲು ಸಿಕ್ಕಾಗುವುದು, ಕೂದಲು ಬಿರುಕು ಬಿಡುವುದು ಹೀಗೆ ಅನೇಕ ಸಮಸ್ಯೆಗಳಿಗೆ ಉತ್ತಮ ಪರಿಹಾರ ಈರುಳ್ಳಿ. ಈರುಳ್ಳಿಯ ಮನೆ ಮದ್ದುಗಳ ಬಗ್ಗೆ ತಿಳಿದುಕೊಂಡರೆ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಜತೆಗೆ ಕೂದಲಿಗೆ ಕಾಂತಿ, ಉತ್ತಮ ಆರೋಗ್ಯ ಕೊಟ್ಟು ಪೋಷಿಸುವ ಗುಣವು ಈರುಳ್ಳಿಗಿದೆ. ಕೂದಲಿನ ಆರೋಗ್ಯ ವೃದ್ಧಿಗೆ ಇಲ್ಲೊಂದಿಷ್ಟು ಉತ್ತಮ ಟಿಪ್ಸ್‌ಗಳಿವೆ ನೋಡಿ. ಇಲ್ಲಿರುವ ಮನೆ ಮದ್ದುಗಳೇ ಅಂತಿಮ ಪರಿಹಾರ ಎಂದಲ್ಲ. ಹೆಚ್ಚು ಸಮಸ್ಯೆಯಿದ್ದರೆ ತಜ್ಞ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಯಾವುದೇ ಎಣ್ಣೆ, ಶ್ಯಾಂಪೂ ಬಳಸಿದರೂ ಕೂದಲು ಉದುರುವುದು ಕಡಿಮೆ ಆಗುತ್ತಿಲ್ಲವೆಂದು ಚಿಂತೆ ಮಾಡಬೇಡಿ. ಈರುಳ್ಳಿಇದಕ್ಕೆಪರಿಹಾರನೀಡುತ್ತದೆ. -ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿನಿವಾರಣೆಯಾಗುತ್ತದೆ.ವಾರದಲ್ಲಿಎರಡುಬಾರಿಹೀಗೆಮಾಡಿದರೆಉತ್ತಮಫಲಿತಾಂಶಸಿಗುತ್ತದೆ. ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆಕೂದಲಎಲ್ಲಸಮಸ್ಯೆಗಳುಬಹುಬೇಗಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚ ಈರುಳ್ಳಿ ರಸ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ಈರುಳ್ಳಿಗೆಜೇನುತುಪ್ಪಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.