ಹಿಂಜಾವೇ ಆಲಂಕಾರು ಘಟಕಾಧ್ಯಕ್ಷರಾಗಿ ಜನಾರ್ಧನ ಕಯ್ಯಪೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಹಿಂದೂ ಜಾಗರಣ ವೇದಿಕೆ ಆಲಂಕಾರು ಘಟಕ ರಚಿಸಲಾಗಿದ್ದು ಇದರ ಅಧ್ಯಕ್ಷರಾಗಿ ಜನಾರ್ದನ ಕಯ್ಯಪೆ, ಸಂಚಾಲಕರಾಗಿ ಧನಂಜಯ ಕಜೆ ನೇಮಕಗೊಂಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಸಹಸಂಚಾಲಕರಾಗಿ ಮಲ್ಲೇಶ್ ಆಲಂಕಾರು ಇವರನ್ನು ನೇಮಕ ಮಾಡಲಾಗಿದೆ.

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಗುರುವಾರದಂದು ನಡೆದ ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ಬೈಠಕ್ ನಲ್ಲಿ ನೂತನ ಘಟಕ ರಚಿಸಲಾಯಿತು. ಕಾರ್ಯದರ್ಶಿಯಾಗಿ ಮನೋಹರ ಬಾರಡ್ಕ, ಸಹಸಂಚಾಲಕರಾಗಿ ಜಯಪ್ರಕಾಶ್ ಪಟ್ಟೆ, ಸತೀಶ್ ಆಲಂಕಾರು, ಸಂತೋಷ್ ಆಲಂಕಾರು, ಹರೀಶ್ ಕಮಿತ್ತಿಲ್, ರವಿ ಕೊಂಡಾಡಿ, ಹರೀಶ್ ಕೊಂಡಾಡಿ ನೇಮಕಗೊಂಡಿದ್ದಾರೆ. ಹಿಂಜಾವೇ ಪುತ್ತೂರು ಜಿಲ್ಲಾ ಸಹಸಂಚಾಲಕ ಮೋಹನ್ ಕೊೖಲ ನೂತನ ಘಟಕದ ಪದಾಧಿಕಾರಿಗಳ ಘೋಷಣೆ ಮಾಡಿದರು. ಮಂಗಳೂರು ವಿಭಾಗ ಸಂಚಾಲಕ ರವಿರಾಜ್ ಶೆಟ್ಟಿಯವರು ಕಡಬ ತಾಲೂಕು ಸಹ ಸಂಚಾಲಕರ ಘೋಷಣೆ ಮಾಡಿದರು. ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ, ಸಂಚಾಲಕ ವೆಂಕಟ್ರಮಣ ಕುತ್ಯಾಡಿ ಉಪಸ್ಥಿತರಿದ್ದರು.

error: Content is protected !!
Scroll to Top