ತಂಪಾದ ಖಾದ್ಯ ವೈವಿಧ್ಯ

(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಬೇಸಗೆಯಲ್ಲಿ ಊಟ ಸೇರದಿರುವುದಕ್ಕಾಗಿ ಹೆಚ್ಚಾಗಿ ಸಲಾಡ್ಗೆ ಒತ್ತು ನೀಡುತ್ತೇವೆ. ಅದರಲ್ಲೂ ಸಿಹಿ, ಖಾರ ಮಿಶ್ರಿತವಾದ ಸಲಾಡ್ಗಳು ಬೇಸಗೆಯಲ್ಲಿ ಆರೋಗ್ಯ, ಡಯಾಟ್ಬಗ್ಗೆ ಯೋಚಿಸುವವರಿಗೆ ಸೂಕ್ತ ಆಹಾರ.

ಪಾಸ್ತಾಸಲಾಡ್
ಬೇಕಾಗುವಸಾಮಗ್ರಿಗಳು
·ಪಾಸ್ತಾ-1ಕಪ್‌,
·ಕ್ಯಾರೆಟ್‌ತುರಿ-ಅರ್ಧಕಪ್‌
·ಈರುಳ್ಳಿ-1,
·ಕ್ಯಾಪ್ಸಿಕಮ್ –ಅರ್ಧ,
·ಟೊಮೇಟೊ-1
·ಈರುಳ್ಳಿ,ಮಯೊನೈಸ್‌-5ಚಮಚ,
·ಸಬ್ಬಸಿಗೆಸೊಪ್ಪು–1ಕಪ್‌,
·ರುಚಿಗೆಉಪ್ಪು,ಎಣ್ಣೆ-2ಚಮಚ,
·ಕಾಳುಮೆಣಸಿನಪುಡಿ-ಅರ್ಧಚಮಚ,
· ಲಿಂಬೆ ಹೋಳು -1.

ಮಾಡುವವಿಧಾನ:
ಒಂದು ಬಾಣಲೆಯಲ್ಲಿ 5 ಲೋಟ ನೀರು, 2 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ಒಂದು ಕುದಿ ಬಂದ ನಂತರ ಪಾಸ್ತಾ ಹಾಕಿ, ಅದು ಮೃದುವಾಗುವವರೆಗೂ ಬೇಯಿಸಿ. ಬೆಂದ ಪಾಸ್ತಾವನ್ನು ನೀರು ಬಸಿ ಯಿರಿ. ಒಂದು ಬೌಲ್‌ನಲ್ಲಿ ಮಯೊನೈಸ್‌, ಕಾಳುಮೆಣಸಿನ ಪುಡಿ, ಲಿಂಬೆ ರಸ, ಉಪ್ಪು ಬೆರೆಸಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್‌ ತುರಿ ಹಾಕಿ, ಬೆಂದ ಪಾಸ್ತಾವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಅಥವಾ ಸಬ್ಬಸಿಗೆ ಸೊಪ್ಪಿನಿಂದ ಅಲಂಕರಿಸಿ. ಈ ಸಲಾಡ್‌ ಅನ್ನು ಬೆಳಗಿನ ಉಪಾಹಾರವಾಗಿಯೂ ಸೇವಿಸಬಹುದು.

error: Content is protected !!

Join the Group

Join WhatsApp Group